ಕೆ.ಎನ್.ಪಿ.ವಾರ್ತೆ,ಚಿತ್ರದುರ್ಗ,ಅ.26;

ಮಾನವತ ಮೌಲ್ಯಗಳ ಆಧಾರದ ಮೇಲೆಯೇ ರಾಷ್ಟ್ರ ಕಟ್ಟುವ ಕೆಲಸವನ್ನು ಗಾಂಧಿ ಮತ್ತು ವಿನೋಭಾ ಭಾವೆ ಮಾಡಿದರು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಡಾ.ಶರಣಪ್ಪ ವಿ ಹಲಸೆ ಹೇಳಿದರು.

ನಗರದ ತ ರಾ ಸು ರಂಗಮಂದಿರದಲ್ಲಿ ಸರಸ್ವತಿ ಕಾನೂನು ಕಾಲೇಜಿನ ವತಿಯಿಂದ ಮತ್ತು ಚಿತ್ರದುರ್ಗ ಜಿಲ್ಲಾ ಪದವಿ ಕಾಲೇಜುಗಳ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಬಾಪು 150ನೇ ಮತ್ತು ವಿನೋಭಾ ಭಾವೆ 125ನೇ ಜಯಂತಿ ಆಚರಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರೊ||ಪಿ.ಈಶ್ವರ್ ಭಟ್ ಉದ್ಘಾಟನೆ ಮಾಡಿ, ದೇಶಕ್ಕಾಗಿ ಗಾಂಧೀಜಿ ಮತ್ತು ಭಾವೆಯವರ ವಿಚಾರ ಧಾರೆ ತಿಳಿಸಿದರು, ಸನ್ಮಾನಿತರಾದ ಹಾಗೂ ಕಾರ್ಯಕ್ರಮದ ಕೇಂದ್ರ ಬಿಂದು ಆದ ಸ್ವಾತಂತ್ರ್ಯ ಹೋರಾಟಗಾರ್ತಿ, ಗಾಂಧಿವಾದಿಮಾತೋಶ್ರೀ ಚನ್ನಮ್ಮ ಹಳ್ಳಿಕೇರಿಯವರು ಗಾಂಧಿ ಮತ್ತು ಭಾವೆಯವರ ಭೇಟಿಯ ಆಮೋಘ ಸಂದರ್ಭ, ಅವರ ಅನ್ಯೋನ್ಯತೆ ಮೆಲಕು ಹಾಕುತ್ತಾ ಕಾನೂನು ವಿದ್ಯಾರ್ಥಿಗಳಿಗೆ ”ಜೈಜಗತ್” ಎಂಬ ಮಂತ್ರವನ್ನು ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್. ಹನುಮಂತಪ್ಪನವರು ವಹಿಸಿದ್ದರು.

ಗಾಂಧೀಜಿ ಅವರ ಕೊನೆಯ ದಿನಗಳನ್ನು ಮನಮುಟ್ಟುವಂತೆ ವಿವರಿಸಿ, ಬಾ-ಬಾಪು ಎಂಬ ಸ್ವರಚಿತ ಕವನವನ್ನು ವಿಶ್ರಾಂತ ಪ್ರಾಂಶುಪಾಲರಾದ ಜಿ ಎನ್ ಮಲ್ಲಿಕಾರ್ಜುನಪ್ಪನವರು ವಾಚಿಸಿದರು, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಕೀಲರಾದ ಡಿ ಕೆ ಶೀಲಾ. ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಎಂ ಎಸ್ ಸುಧಾದೇವಿ ಯವರು ಉಪಸ್ಥಿತರಿದ್ದರು.

ವರದಿ : ವೇದಮೂರ್ತಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.