ಕೆ.ಎನ್.ಪಿ.ವಾರ್ತೆ,ಕೋಜಿಕ್ಕೋಡ್,ನ.30;

ಕೇರಳ ಸಾಹಿತ್ಯ ಪ್ರೇಮಿಗಳಿಗೆ ಅಕ್ಕಿತಂ ಎಂಬ ಕಾವ್ಯನಾಮದಿಂದಲೇ ಜನಪ್ರಿಯರಾಗಿರುವ ಮಲೆಯಾಳಂ ಹಿರಿಯ ಸಾಹಿತಿ ಅಚ್ಯುತನ್ ನಂಬೂದರಿ ಅವರಿಗೆ ಸಾಹಿತ್ಯಕ್ಕಾಗಿ ನೀಡುವ ಅತ್ಯಂತ ಪ್ರತಿಷ್ಟಿತ ಜ್ಞಾನಪೀಠ ಪುರಸ್ಕಾರವನ್ನು ಶುಕ್ರವಾರ ಅಧಿಕೃತವಾಗಿ ಘೋಷಿಸಲಾಗಿದೆ.

ಹೃದಯದಿಂದಲೇ ಬರೆಯುವ ಸಾಹಿತಿ ಎಂದೇ ಮಲೆಯಾಳಂ ಓದುಗ ಪ್ರೇಮಿಗಳಲ್ಲಿ ಜನಪ್ರಿಯರಾಗಿರುವ ಅಚ್ಯುತನ್ ನಂಬೂದರಿ ಅವರಿಗೆ 2019ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಸಂದಿದೆ. 

ಕವಿತೆ, ನಾಟಕ, ಪ್ರಬಂಧ, ಸಣ್ಣ ಕಥೆ ಹಾಗೂ ಮಕ್ಕಳ ಕಥೆ ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ನಂಬೂದರಿ ಕೃಷಿ ಮಾಡಿದವರು. ಸರಳ ಬರವಣಿಗೆಯೇ ಇವರನ್ನು ಓದುಗರಿಗೆ ಹತ್ತಿರವಾಗಿಸಿದೆ.

93 ವರ್ಷದ ಅಕ್ಕಿತ್ತಂ ಅವರು 55 ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ 45ಕ್ಕೂ ಹೆಚ್ಚು ಕೃತಿಗಳು ಕವನ ಸಂಗ್ರಹಗಳು. 1952ರಲ್ಲಿ ಪ್ರಕಟವಾದ ಮೊದಲ ಕೃತಿ ‘ಖಂಡಕಾವ್ಯ’ ಮೂಲಕವೇ ಅಕ್ಕಿತ್ತಂ ಸಾರಸ್ವತ ಲೋಕದ ಗಮನ ಸೆಳೆದರು.

‘ವೀರವಂದಮ್‌’, ‘ಬಲಿದರ್ಶನಂ’, ‘ನಿಮಿಷ ಕ್ಷೇತ್ರಂ’, ‘ಅಮೃತ ಕಟಿಕ’ , ‘ಅಕ್ಕಿತ್ತಮ್‌ ಕವಿತಕ’, ‘ದೇಶ ಸೇವಿಕ’ ಪ್ರಮುಖ ಕಾವ್ಯ ಕೃತಿಗಳು.

ವಿಷ್ಣು ಅವತಾರ ಕುರಿತು ವೇದ ವ್ಯಾಸರು ರಚಿಸಿರುವ ಶ್ರೀಮದ್‌ ಭಾಗವತದ 14,163 ಶ್ಲೋಕಗಳನ್ನು 2,400 ಪುಟಗಳಲ್ಲಿ ಮಲಯಾಳಂಗೆ ಭಾಷಾಂತರಿಸಿದ್ದಾರೆ. ‘ಬಲಿದರ್ಶನಂ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

ಅಸ್ಪೃಶ್ಯತೆ ವಿರುದ್ಧ ಸದಾ ಧ್ವನಿ ಎತ್ತುವ ಅಕ್ಕಿತಂ ಅವರು 1947ರಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಕೇರಳದಲ್ಲಿ ನಡೆದ ಪಲಿಯಾಮ್‌ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಬ್ರಾಹ್ಮಣೇತರರಿಗೆ ವೇದ ಶಿಕ್ಷಣ ನೀಡುವಲ್ಲಿ ಇವರ ಪಾತ್ರ ಗಣನೀಯವಾಗಿದೆ.

ಹಲವು ಪುರಸ್ಕಾರ :

ಅಚ್ಯುತನ್‌ ನಂಬೂದರಿ ಅವರಿಗೆ 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೇರಳ ಸಾಹಿತ್ಯ ಅಕಾಡೆಮಿ, ವಯಲಾರ್‌, ನಲಪಾಡ್‌ ಪ್ರಶಸ್ತಿ, ಲಲಿತಾಂಬಿಕ ಸಾಹಿತ್ಯ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳು ಲಭಿಸಿವೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.