ಕೆ.ಎನ್.ಪಿ.ವಾರ್ತೆ,ಹಾವೇರಿ,ಜೂ.30;

ಪ್ರತಿಭೆ ಯಾರ ಮನೆಯ ಸೊತ್ತಲ್ಲ, ಅದು ಸಾಧಕರ ಸೊತ್ತು. ಪ್ರತಿಭೆ ಗುಡಿಸಿಲಿನಲ್ಲಿ ಹುಟ್ಟುತ್ತೆ, ಅರಮನೆಯಲ್ಲಿ ಸಾಯುತ್ತೆ. ಅಂತಹ ಗ್ರಾಮೀಣ ಪ್ರತಿಭೆಯ ಪರಿಚಯ ಮಾಡಿಸುವುದೆ ಈ ಲೇಖನದ ಉದ್ದೇಶ.

ವೃತ್ತಿಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಕೆಯ ಸಹಾಯಕಿ ಪ್ರವೃತ್ತಿಯಲ್ಲಿ ಗಾಯಕಿ ಬರಹಗಾರ್ತಿ ಅವಳ ಕಂಠ ಸಿರಿಯಿಂದ ಮೂಡಿಬಂದ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ 70 ಲಕ್ಷಕ್ಕೂ ಅಧಿಕ ವೀಕ್ಷಣೆಹೊಂದಿರುವ ದೇಸಿ ಪ್ರತಿಭೆ ಹಾಗಾದರೆ ಆ ಗಾಯಕಿ ಯಾರು ಅಂತೀರಾ ಈ ಸ್ಟೋರಿ ಓದಿ….

ಈ ಮಹಿಳೆ ಬೇರೆ ಯಾರು ಅಲ್ಲ ತಾಲೂಕಿನ ನೆಗಳೂರ ಗ್ರಾಮದ ನಿವಾಸಿ ಮಂಜುಳಾ ಫಕ್ಕೀರೇಶ ಕೊಪ್ಪದ ಮಂಜುಳಾ ಅವರು ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗ್ರಾಮದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಜಾತ್ರಾಮಹೋತ್ಸವದಲ್ಲಿ ಹಾಡು ಹೇಳುವುದರ ಮೂಲಕ ಸಂಗೀತದ ಕಡೆಗೆ ಆಸಕ್ತಿ ಬೆಳಸಿಕೊಂಡಿದ್ದರಂತೆ ಮನೆಯಲ್ಲಿ ಬಡತನ ಹಿನ್ನಲೆಯಲ್ಲಿ ಪ್ರೌಢ ಶಿಕ್ಷಣಕ್ಕೆ ತಮ್ಮ ಶಿಕ್ಷಣವನ್ನು ನಿಲ್ಲಿಸಬೇಕಾಗಿ ಬಂತು ಎಂದರು.

ಆದರೆ ಹಾಡುವುದನ್ನು ಮರೆಯಲಿಲ್ಲ ಮನೆಯಲ್ಲಿದ್ದಾಗ ಕೆಲಸ ಮಾಡುವಾಗ ಹಾಡು ಹೇಳುತ್ತಿದ್ದೆ. ಮದುವೆಯಾದ ನಂತರ ಗಂಡನ ಮನೆಗೆ ಬಂದಾಗ ಇಲ್ಲಿಯೂ ಕೂಡ ಪತಿ ಪಕ್ಕಿರೇಶ ಅವರ ಪ್ರೋತ್ಸಾಹ ಸಹಕಾರ ದೊರಕಿತು.

ವರವಾದ ಬಿಸಿಊಟ ತಯಾರಿಕೆ ಸಹಾಯಕಿ ಹುದ್ದೆ :

ಪತಿ ಕೂಲಿ ಕೆಲಸ ಕೃಷಿ ಚಟುವಟಿಕೆಗಳಿಂದ ಬಂದ ಹಣದಿಂದ ಸಂಸಾರದ ನೌಕೆ ಸಾಗಿಸಲು ಹರ ಸಾಹಸ ಪಡುತ್ತಿದ್ದರು. ಈಗ ಮೂರು ವರ್ಷಗಳಿಂದ ಗ್ರಾಮದ ಗಂಡುಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಕೆ ಸಹಾಯಕಿಯಾಗಿ ಸೇರಿಕೊಂಡ ನಂತರ ನೆಮ್ಮದಿಯ ಜೀವನ ನಡೆಸುವಂತಾಗಿದೆ.

ಪ್ರತಿಭೆಗೆ ವರವಾದ ಸಾಮಾಜಿಕ ಜಾಲತಾಣ :

ಮಂಜುಳಾರವರು ಕೇವಲ ಮನೆ ಹಾಗೂ ಶಾಲೆಯಲ್ಲಿ ಬಿಡುವಿನ ವೇಳೆಯಲ್ಲಿ ಸುಶ್ರಾವ್ಯವಾಗಿ ಹಾಡುತ್ತಿದ್ದರಂತೆ ಈ ಹಾಡುಗಳನ್ನು ಮುದ್ರಣಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವಂತೆ ಆತ್ಮೀಯರೊಬ್ಬರು ಹೇಳಿದಾಗ ಮೊಬೈಲ್ ತೆಗೆದುಕೊಂಡು ಅದನ್ನು ಯಾವ ರೀತಿ ಬಳಕೆ ಮಾಡಬೇಕೆಂಬುದನ್ನು ಕಲಿತ ಮಂಜುಳಾ ತಾನು ಹಾಡಿದ ಹಾಡುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಾರೆ.

ಆ ಒಂದು ಪ್ರಯತ್ನದಿಂದ ಹಾಡುಗಳು ವೈರಲ್ ಆಗಿ ಲಕ್ಷಾಂತರ ವೀಕ್ಷಕರು ಹುಟ್ಟಿಕೊಳ್ಳುವಂತೆ ಮಾಡಿತು. ಅದರಲ್ಲಿಯೂ ಪುಲ್ವಾಮಾ ದಾಳಿ ನಡೆದಾಗ ಭಾರತೀಯ ಸೈನಿಕರ ಕುರಿತು ಹಾಗೂ ನನ್ನ ಗೆಳೆಯ ಸ್ವರಚಿತವಾಗಿ ಬರೆದು ಹಾಡಿದ ಹಾಡಿಗೆ 70 ಲಕ್ಷ ಅಧಿಕ ಜನರು ವೀಕ್ಷಣೆ ಮಾಡಿ ಒಳ್ಳೇಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಸಮಾನ ಮನಸ್ಕ ತಂಡದೊಂದಿಗೆ ಗುರುಶಾಂತೇಶ್ವರ ಮೆಲೋಡಿಸ್ ಎಂಬ ತಂಡವನ್ನು ಕಳೆದ ಮೂರು ತಿಂಗಳಿಂದ ಕಟ್ಟಿಕೊಂಡು ಗ್ರಾಮ ನಗರ ಪಟ್ಟಣಗಳಲ್ಲಿ ಜರಗುವ ಮದುವೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದ್ದಾರೆ.

ಮಂಜುಳಾ ಫಕ್ಕಿರೇಶ ಕೊಪ್ಪದ

ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆಯಾದ ಜೀ ಕನ್ನಡ ವಾಹಿನಿಯ ಸರಿಗಮಪ ಅಥವಾ ಕಲರ್ಸ್ ಕನ್ನಡ ವಾಹಿನಿಯ ಕನ್ನಡ ಕೋಗಿಲೆಯಲ್ಲಿ ಭಾಗವಹಿಸುವ ಹಂಬಲವಿದೆ ಜೊತೆಗೆ ಗ್ರಾಮದ ಮಕ್ಕಳಿಗೆ ಸಂಗೀತ ಕಲಿಸಬೇಕೆಂಬ ಆಶಯ ನನ್ನದಾಗಿದೆ.

ಪಕ್ಕಿರೇಶ ಕೊಪ್ಪದ ಮಂಜುಳಾ ಪತಿ

ಅವಳು ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಪರಿಣಿತಿ ಹೊಂದಿ ಉತ್ತಮ ಗಾಯಕಿಯಾಗಿ ನಮ್ಮ ಮನೆಗೂ ನಮ್ಮ ಗ್ರಾಮಕ್ಕೆ ಹೆಸರು ತರುವಂತಾಗಲಿ ಅದಕ್ಕೆ ಸಂಪೂರ್ಣ ಸಹಕಾರ ಮತ್ತು ಪ್ರೋತ್ಸಾಹ ನೀಡುತ್ತೇನೆ.

ಒಟ್ಟಾರೆಯಾಗಿ ಹಾವೇರಿ ಜಿಲ್ಲೆಯಲ್ಲಿ ಇಂತಹ ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳಿಗೆ ಬರವಿಲ್ಲ ಅವುಗಳನ್ನು ಮುಖ್ಯ ವಾಹಿನಿಗೆ ತರುವಂತಹ ಕಾರ್ಯವಾಗಬೇಕಿದೆ. ಮುಂದಿನ ದಿನಗಳಲ್ಲಿ ಅಂತಹ ಉತ್ತಮವಾದ ವೇದಿಕೆ ಮಂಜುಳಾಳಿಗೆ ಸಿಗಲಿ ಎಂಬುದು ನಮ್ಮ ಆಶಯ.

ಚಿತ್ರ ವರದಿ : ಗುರುಶಾಂತಸ್ವಾಮಿ ಹಿರೇಮಠ ನೆಗಳೂರ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ವಿಳಾಸkarnatakanewsportal@gmail.com

ಕೆ.ಎನ್.ಪಿ. ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ