ಕೆ.ಎನ್.ಪಿ.ವಾರ್ತೆ,ನವದೆಹಲಿ,ನ.10;

ಎಲ್‌ಪಿಜಿ ಅಡುಗೆ ಅನಿಲದ ಸಿಲಿಂಡರ್‌ ದರ 2 ರೂಪಾಯಿ ಏರಿಕೆಯಾಗಿದೆ. ಸರ್ಕಾರವು ಎಲ್‌ಪಿಜಿ ಗ್ಯಾಸ್ ವಿತರಕರಿಗೆ ನೀಡಲಾಗುವ ಕಮಿಷನ್ ಮೊತ್ತವನ್ನು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಸಿಲಿಂಡರ್‌ ದರದಲ್ಲಿ ಏರಿಕೆಯಾಗಿದೆ.

ರಾಜಧಾನಿ ದೆಹಲಿಯಲ್ಲಿ 14.2 ಕೆ.ಜಿ.ಸಬ್ಸಿಡಿ ಸಿಲಿಂಡರ್‌ ದರ ಈಗ ರೂ.505.34ರಿಂದ ರೂ. 507.42ಕ್ಕೆ ಏರಿಕೆಯಾಗಿದೆ. ಕೇಂದ್ರ ಇಂಧನ ಸಚಿವಾಲಯದ ಆದೇಶದನ್ವಯ ಏರಿಕೆ ಜಾರಿಗೆ ಬಂದಿದೆ.

ಕಳೆದ ಸಲ, ಅಂದರೆ 2017ರ ಸೆಪ್ಟೆಂಬರ್‌ನಲ್ಲಿ 14.2 ಕೆ.ಜಿ ಮತ್ತು 5 ಕೆ.ಜಿ ಸಿಲಿಂಡರ್‌ಗಳಿಗೆ ಸ್ಥಳೀಯ ಎಲ್‌ಪಿಜಿ ವಿತರಕರಿಗೆ ಕ್ರಮವಾಗಿ ರೂ.48.89 ಮತ್ತು ರೂ.24.20 ಕಮಿಷನ್‌ ನಿಗದಿ ಪಡಿಸಲಾಗಿತ್ತು. ಈಗ ಮತ್ತೆ 2 ರೂ. ಏರಿಕೆ ಮಾಡಲಾಗಿದೆ. ಈ ತಿಂಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಆಗುತ್ತಿರುವ ಎರಡನೇ ಹೆಚ್ಚಳ ಇದಾಗಿದೆ.

ತೆರಿಗೆ ಹೊಂದಾಣಿಕೆ ಕಾರಣಕ್ಕೆ ನ.1ರಂದು ಸಿಲಿಂಡರ್‌ ಮೂಲ ಬೆಲೆಯಲ್ಲಿ ಅಂದರೆ ಸಿಲಿಂಡರ್‌ವೊಂದಕ್ಕೆ ರೂ.2.94 ಹೆಚ್ಚಳ ಮಾಡಲಾಗಿತ್ತು. ಜಿಎಸ್‌ಟಿ ಪದ್ಧತಿ ಜಾರಿಗೆ ಬಂದ ಬಳಿಕ ಜೂನ್‌ನಿಂದ ಪ್ರತಿ ತಿಂಗಳೂ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಏರಿಕೆಯಾಗಿದೆ. ಈ ತನಕ ಒಟ್ಟು ಬೆಲೆ ರೂ.16.21 ಏರಿಕೆಯಾಗಿದೆ. ಮುಂಬಯಿನಲ್ಲಿ 14.2 ಕೆ.ಜಿ. ಅಡಿಗೆ ಅನಿಲ ಸಿಲೆಂಡರ್‌ ಬೆಲೆ ಈಗ ರೂ.505.05ಕ್ಕೆ ಮುಟ್ಟಿದೆ. ಚೆನ್ನೈನಲ್ಲಿ ರೂ.495.39 ಇದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.