ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮೇ.23;

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಪ್ರಗತಿಯಲ್ಲಿದ್ದು, ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಬಳ್ಳಾರಿ, ಚಿಕ್ಕಬಳ್ಳಾಪುರ, ಕೋಲಾರ ,ಶಿವಮೊಗ್ಗ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ವಿವಿ ಪ್ಯಾಟ್ ಚೀಟಿ ತಾಳೆ ಹಾಕುವ ಪ್ರಕ್ರಿಯೆ ಬಳಿಕ ಚುನಾವಣಾ ಆಯೋಗ ಅಧಿಕೃತ ಫಲಿತಾಂಶವನ್ನು ಘೋಷಣೆ ಮಾಡಲಿದೆ.

ಲೋಕಸಭೆ ಚುನಾವಣೆ ಫಲಿತಾಂಶದ ಮುಖ್ಯಾಂಶಗಳು ಇಂತಿವೆ :

 • 12:54 pm : ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಎ. ನಾರಾಯಣ ಸ್ವಾಮಿಗೆ ಗೆಲುವು. ಅಧಿಕೃತ ಘೋಷಣೆ ಬಾಕಿ!
 • 12:50 pm : ವಿಜಯಪುರದಲ್ಲಿ ಬಿಜೆಪಿ ರಮೇಶ್ ಜಿಣಜಿಣಗಿಗೆ ಭರ್ಜರಿ ಗೆಲುವು!
 • 12:39 pm : ತುಮಕೂರಿನಲ್ಲಿ 10ನೇ ಸುತ್ತಿನ ಮತ ಎಣಿಕೆ ಅಂತ್ಯ. ಹೆಚ್ ಡಿ ದೇವೇಗೌಡರಿಗೆ 20 ಸಾವಿರ ಹಿನ್ನಡೆ. ಮುನ್ನಡೆ ಕಾಯ್ದುಕೊಂಡ ಬಿಜೆಪಿ
 • 12:35 pm : ಕರ್ನಾಟಕ ಮೈತ್ರಿ ಸರ್ಕಾರದಲ್ಲಿ ಬಿರುಕು. ಮೈತ್ರಿಯಿಂದ ಕಾಂಗ್ರೆಸ್ ಗೆ ಡ್ಯಾಮೇಜ್.
 • 12:34 pm : ದೇಶದ ಆರು ರಾಜ್ಯಗಳಲ್ಲಿ ಖಾತೆ ತೆರೆಯದ ಕಾಂಗ್ರೆಸ್!
 • 12:32 pm : ಮಂಡ್ಯದಲ್ಲಿ ನಿಖಿಲ್ ವಿರುದ್ಧ ಸುಮಲತಾಗೆ 18 ಸಾವಿರ ಮತಗಳ ಮುನ್ನಡೆ
 • 12:27 pm : ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ವಿರುದ್ಧ ಗೆದ್ದ ಬಿಜೆಪಿ ಅಭ್ಯರ್ಥಿ ಬಿಎನ್ ಬಚ್ಚೇಗೌಡ!
 • 12:11 pm : ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯಗೆ ಗೆಲುವು. ಅಧಿಕೃತ ಘೋಷಣೆ ಬಾಕಿ!
 • 12:02 pm : ಟಿಡಿಪಿ ಹೀನಾಯ ಸೋಲು: ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಜಿನಾಮೆ ಸಾಧ್ಯತೆ!
 • 12:01 pm : ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಡಿಕೆ ಸುರೇಶ್ ಭರ್ಜರಿ ಗೆಲುವು. ಶಿವಮೊಗ್ಗದಲ್ಲಿ ಬಿ.ವೈ ರಾಘವೇಂದ್ರಗೆ ಗೆಲುವು. ಅಧಿಕೃತ ಘೋಷಣೆ ಬಾಕಿ.
 • 11:53 am : ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಗೆಲುವು. ಅಧಿಕೃತ ಘೋಷಣೆ ಬಾಕಿ!
 • 11:53 am : ಭೋಪಾಲ್ ನಲ್ಲಿ ಪ್ರಗ್ಯಾ ಸಿಂಗ್ ಗೆ ಭರ್ಜರಿ ಗೆಲುವು. ಕಾಂಗ್ರೆಸ್ ನ ದಿಗ್ವಿಜಯ್ ಸಿಂಗ್ ಗೆ ಹೀನಾಯ ಸೋಲು
 • 11:51 am : ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಕೇಂದ್ರ ಸಚಿವರಾಗಿದ್ದ ಕೆಎಚ್ ಮುನಿಯಪ್ಪಗೆ ಹೀನಾಯ ಸೋಲು, ಬಿಜೆಪಿಯ ಮುನಿಸ್ವಾಮಿಗೆ ಗೆಲುವು!
 • 11:40 am : ಪಾಕಿಸ್ತಾನದ ರಾಯಭಾರಿ ಕಚೇರಿಯಲ್ಲೂ ಭಾರತದ ಲೋಕಸಭೆ ಚುನಾವಣೆ ಫಲಿತಾಂಶದ ನೇರ ಪ್ರಸಾರ!
 • 11:34 am : ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಅನಂತ್ ಕುಮಾರ್ ಹೆಡ್ಗೆ, ಶೋಭಾ ಕರಂದ್ಲಾಜೆ, ನಳೀನ್ ಕಟೀಲ್ ಗೆ ಗೆಲುವು ಖಚಿತ. ಅಧಿಕೃತ ಘೋಷಣೆ ಬಾಕಿ!
 • 11:31 am : ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪಗೆ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ವಿರುದ್ಧ ಗೆಲುವು ಖಚಿತ. ಅಧಿಕೃತ ಘೋಷಣೆ ಬಾಕಿ!
 • 11:20 am : ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಭಾಷಣ ಸಾಧ್ಯತೆ.
 • 11:18 am : ವಾರಣಾಸಿಯಲ್ಲಿ ಮೋದಿಗೆ, 1,20,000 ಲಕ್ಷ ಹಾಗೂ ಗಾಂಧೀನಗರದಲ್ಲಿ ಅಮಿತ್ ಶಾಗೆ 1,90,000 ಲಕ್ಷ ಭಾರೀ ಮುನ್ನಡೆ.
 • 11:02 am : ಬಹುಮತದತ್ತ ಎನ್ ಡಿಎ, ಷೇರುಪೇಟೆ 40,000 ಅಂಕ ಜಿಗಿತ
 • 11:01 am : ಎಚ್ ಡಿ ದೇವೇಗೌಡರು(ಜೆಡಿಎಸ್)- 95414, ಜಿ ಎಸ್ ಬಸವರಾಜು(ಬಿಜೆಪಿ)-101434. ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು 6029 ಮತಗಳ ಅಂತರದ ಮುನ್ನಡೆ.
 • 11:00 am : ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮನೆಯಲ್ಲಿ ಮೈತ್ರಿ ಸರ್ಕಾರ ಉರುಳಿಸುವ ಬಗ್ಗೆ ತೀವ್ರ ಚರ್ಚೆ
 • 10:46 am: ಗುಜರಾತ್ ನ ಗಾಂಧಿನಗರ ಕ್ಷೇತ್ರದಲ್ಲಿ 1,25,000 ಮತಗಳ ಅಂತರದಲ್ಲಿ ಮುಂದಿರುವ ಅಮಿತ್ ಶಾ
 • 10:09 am: ಗುಜರಾತ್ ನಲ್ಲಿ ಕ್ಲೀನ್ ಸ್ವೀಪ್ ನತ್ತ ಬಿಜೆಪಿ!
 • 9:56 am : ಮತ ಎಣಿಕೆ: ತ್ರಿಶತಕ ಮುನ್ನಡೆ ಸಾಧಿಸಿದ ಎನ್‌ಡಿಎ
 • 9:47 am : ಆಂಧ್ರದಲ್ಲಿ ವಿಧಾನಸಭೆ ಚುನಾವಣೆ: ಚಂದ್ರಬಾಬು ನಾಯ್ಡುಗೆ ಹಿನ್ನಡೆ, ಸರ್ಕಾರ ರಚಿಸುವತ್ತಾ ಜಗನ್ ಮೋಹನ್ ರೆಡ್ಡಿ
 • 9:38 am: ಚಿಂಚೋಳಿ ಉಪ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಖಚಿತ. ಬಿಜೆಪಿಗೆ 105ಕ್ಕೆ ಏರಿಕೆ ಸಾಧ್ಯತೆ
 • 9:37 am : ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿಗೆ, ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿಗೆ ಹಿನ್ನಡೆ
 • 9:08 am: ಕರ್ನಾಟಕದಲ್ಲಿ ಬಿಜೆಪಿ 23, ಕಾಂಗ್ರೆಸ್ 2, ಜೆಡಿಎಸ್ 3 ಕ್ಷೇತ್ರಗಳಲ್ಲಿ ಮುನ್ನಡೆ
 • 8:30 am : ಮತ ಎಣಿಕೆ ಆರಂಭ: 203 ಕ್ಷೇತ್ರಗಳಲ್ಲಿ ಎನ್‌ಡಿಎ, 107 ಕ್ಷೇತ್ರಗಳಲ್ಲಿ ಯುಪಿಎ ಮುನ್ನಡೆ
 • 8:15 am : ಮಂಡ್ಯದಲ್ಲಿ ಸ್ವತಂತ್ರ್ಯ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆ ಮುನ್ನಡೆ
 • 8:00 am : ಮೇ 25ರೊಳಗೆ ದೆಹಲಿಗೆ ಬರುವಂತೆ ರಾಜ್ಯದ ಬಿಜೆಪಿ ಶಾಸಕರಿಗೆ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬುಲಾವ್
 • 7:56 am : ಲೋಕಸಭೆ ಚುನಾವಣೆ ಫಲಿತಾಂಶ: ಬಹುತೇಕ ದೇಶದ ಎಲ್ಲಾ ಕಡೆ ಮತ ಎಣಿಕೆ ಪ್ರಕ್ರಿಯೆ ಆರಂಭ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.