ಕೆ.ಎನ್.ಪಿ.ವಾರ್ತೆ,ನವದೆಹಲಿ,ಮೇ.19;

ಲೋಕಸಭಾ ಚುನಾವಣೆ 2019ರ 7ನೇ ಮತ್ತು ಅಂತಿಮ ಹಂತದ ಮತದಾನ ಇಂದು ನಡೆಯಲಿದ್ದು, ಪ್ರಧಾನಿ ಮೋದಿ ಸೇರಿ ಘಟಾನುಘಟಿ ನಾಯಕರ ಭವಿಷ್ಯ ಇಂದು ಮತಪೆಟ್ಟಿಗೆ ಸೇರಲಿದೆ.

ಅಬ್ಬರದ ಪ್ರಚಾರ, ವಾಗ್ಯುದ್ಧ, ವಿವಾದ, ಹಿಂಸಾಚಾರಗಳ ನಡುವೆ ಸುಮಾರು ಒಂದೂವರೆ ತಿಂಗಳಿಂದ ದೇಶಾದ್ಯಂತ ಗಮನ ಸೆಳೆದಿದ್ದ ಲೋಕಸಭಾ ಸಮರಕ್ಕೆ ಭಾನುವಾರ ಅಂತಿಮ ತೆರೆ ಬೀಳಲಿದೆ.

ಪ್ರಧಾನಿ ಮೋದಿ, ಹಲವು ಕೇಂದ್ರ ಸಚಿವರು ಮಾಜಿ ಸಿಎಂಗಳು ಸೇರಿದಂತೆ ಘಟಾನುಘಟಿಗಳು ಸ್ಪರ್ಧಿಸಿರುವ 7 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 59 ಸ್ಥಾನಗಳಿಗೆ ಭಾನುವಾರ ಅಂತಿಮ ಹಂತದ ಮತದಾನ ನಡೆಯಲಿದೆ.

ಉತ್ತರ ಪ್ರದೇಶ ಮತ್ತು ಪಂಜಾಬ್ ನ ತಲಾ 13 ಕ್ಷೇತ್ರಗಳು, ಪಶ್ಚಿಮ ಬಂಗಾಳದ 9, ಬಿಹಾರ ಮತ್ತು ಮದ್ಯ ಪ್ರದೇಶದ ತಲಾ ಕ್ಷೇತ್ರಗಳು, ಹಿಮಾಚಲ ಪ್ರದೇಶದ ನಾಲ್ಕು, ಜಾರ್ಖಂಡ್ ನ ಮೂರು ಮತ್ತ ಕೇಂದ್ರಾಡಳಿತ ಪ್ರದೇಶ ಚಂಡೀಘಡದ ಒಂದು ಕ್ಷೇತ್ರ ಸೇರಿದಂತೆ ಒಟ್ಟು 59 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಚುನಾವಣೆ ಎದುರಿಸಲಿರುವ 7 ರಾಜ್ಯಗಳ ಪೈಕಿ ಪ್ರಧಾನಿ ಮೋದಿ ಅವರ ಕ್ಷೇತ್ರ ವಾರಾಣಸಿ ಹಾಗೂ ಸಿಎಂ ಆದಿತ್ಯನಾಥ್‌ ಪ್ರಾಬಲ್ಯದ ಗೋರಖ್‌ಪುರ ಕ್ಷೇತ್ರಗಳನ್ನು ಒಳಗೊಂಡ ಉತ್ತರ ಪ್ರದೇಶ; ಭಾರಿ ಹಿಂಸಾಚಾರ ಮತ್ತು ಸವಾಲು-ಪ್ರತಿ ಸವಾಲಿಗೆ ಸಾಕ್ಷಿಯಾದ ಪ.ಬಂಗಾಳ; ಇಬ್ಬರು ಕೇಂದ್ರ ಸಚಿವರ ಭವಿಷ್ಯ ನಿರ್ಧರಿಸಲಿರುವ ಪಂಜಾಬ್‌, ಲಾಲು ‘ಕುಟುಂಬ ಪ್ರತಿಷ್ಠೆ’ಯ ಕದನವಾಗಿರುವ ಬಿಹಾರ ತೀವ್ರ ಕುತೂಹಲ ಮೂಡಿಸಿವೆ.

ಕಣದಲ್ಲಿರುವ ಘಟನಾನುಘಟಿ ನಾಯಕರು :

ನರೇಂದ್ರ ಮೋದಿ (ಬಿಜೆಪಿ), ವಾರಾಣಸಿ
ರವಿಶಂಕರ್‌ ಪ್ರಸಾದ್‌ (ಬಿಜೆಪಿ) ಪಟನಾ ಸಾಹಿಬ್‌
ಶತ್ರುಘ್ನ ಸಿನ್ಹಾ(ಕಾಂಗ್ರೆಸ್‌) ಪಟನಾ ಸಾಹಿಬ್‌
ಮಿಸಾ ಭಾರ್ತಿ(ಆರ್‌ಜೆಡಿ), ಪಾಟಲಿಪುತ್ರ
ರಾಮ್‌ ಕೃಪಾಲ್‌ ಯಾದವ್‌(ಬಿಜೆಪಿ) ಪಾಟಲಿಪುತ್ರ
ಮೀರಾ ಕುಮಾರ್‌(ಕಾಂಗ್ರೆಸ್‌) ಸಸರಾಮ್‌
ಸನ್ನಿ ಡಿಯೋಲ್‌(ಬಿಜೆಪಿ) ಗುರುದಾಸ್‌ಪುರ
ಅಭಿಷೇಕ್‌ ಬ್ಯಾನರ್ಜಿ(ಟಿಎಂಸಿ), ಡೈಮಂಡ್‌ ಹಾರ್ಬರ್‌
ಚಂದ್ರ ಕುಮಾರ್‌ ಬೋಸ್‌(ಬಿಜೆಪಿ), ಕೋಲ್ಕೊತಾ ದಕ್ಷಿಣ
ಕಿರಣ್‌ ಖೇರ್‌(ಬಿಜೆಪಿ) ಚಂಡೀಗಢ
ಸುಖಬೀರ್‌ ಸಿಂಗ್‌(ಅಕಾಲಿದಳ), ಫೀರೋಜ್‌ಪುರ
ಮನೀಶ್‌ ತಿವಾರಿ (ಕಾಂಗ್ರೆಸ್‌) ಆನಂದ್‌ಪುರ ಸಾಹಿಬ್‌

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.