ಕೆ.ಎನ್.ಪಿ.ಲೇಖನ;

ಕೆ.ಎನ್.ಪಿ.ಲೇಖನ ವಿಭಾಗದಲ್ಲಿ ಪ್ರಗತಿಪರ ಚಿಂತಕರು ಮತ್ತು ಬರಹಗಾರರಾದ ಸಂಗಮೇಶ ಎನ್ ಜವಾದಿ ರವರ “73 ನೇ ಸ್ವಾತಂತ್ರ್ಯೋತ್ಸವದ ಸವಿನೆನಪು…” ಎಂಬ ಲೇಖನವನ್ನು ಪ್ರಕಟಿಸಲಾಗಿದೆ. ಸಹೃದಯರು ಲೇಖನ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ..

ಭಾರತ ಸುಮಾರು 180 -200 ವರ್ಷಗಳ ಕಾಲ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿತ್ತು. 1947, ಆಗಸ್ಟ್ 15ರಂದು ಅವರ ಬಂಧನದ ಕಪಿಮುಷ್ಠಿಯಿಂದ ಬಿಡುಗಡೆ ಹೊಂದುವ ಮೂಲಕ ಸ್ವತಂತ್ರವಾಗಿರುವ ಭಾರತ, ಚಾರಿತ್ರ್ಯ – ಐತಿಹಾಸಿಕವಾಗಿ ಈ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಘಟಿಸಿದ ಅಂದಿನ ಘಟನೆಗಳು ಇತಿಹಾಸದ ಪುಟ ಪುಟಗಳಲ್ಲಿ ದಾಖಲಾಗಿವೆ ಮತ್ತು ಅಜರಾಮವಾಗಿ ಉಳಿದಿವೆ ಬಂಧುಗಳೆ.

ಹೀಗಾಗಿ ಸ್ವಾತಂತ್ರ್ಯ ನಂತರ ಭಾರತ ಪಾಕಿಸ್ತಾನ ಮತ್ತು ತದನಂತರ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದಿರುವುದು ಈಗಿನ ಇತಿಹಾಸ ಹಾಗೂ ಸಿಂಧೂ ನಾಗರಿಕತೆಯಿಂದ ಬೆಳೆದು ಬಂದ ಸಾಮ್ರಾಜ್ಯ ಭಾರತ, ಈ ಭಾರತವನ್ನು ಪರಕೀಯರ ಆಕ್ರಮಣದ ಕಾಲದಲ್ಲಿ ಭಾರತದ ಬಹಳಷ್ಟು ಭೂ ಪ್ರದೇಶವನ್ನು ಕಳೆದುಕೊಂಡಿದ್ದು ನಮ್ಮ ದುರ್ದೈವ ಸಂಗತಿ ಅಂದರೆ ತಪ್ಪಗಲಾರದು.

ಕಳೆದುಕೊಂಡ ಭೂ ಪ್ರದೇಶವನ್ನು ಮರಳಿ ಪಡೆಯುವ ಸುಸಂದರ್ಭ ಭವಿಷ್ಯದ ದಿನಗಳಲ್ಲಿ ಬಂದೇ ಬರುತ್ತದೆ ಎನ್ನುವ ಆಶಾವಾದ ಪ್ರತಿಯೊಬ್ಬ ಭಾರತೀಯರದಾಗಿದೆ. ಹಾಗಾಗಿ ಆ ದಿನಗಳು ಬೇಗ ಬರಲೆಂದು ನಿರೀಕ್ಷೆ ಮಾಡುತ್ತಾ, ಇಂದು 73 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಣೆ ಮಾಡುತ್ತಿದೇವೆ. ಆದ್ದರಿಂದ ಈ ಹಿನ್ನೆಲೆಯಲ್ಲಿ ದಿನಾಚರಣೆ ಮಹತ್ವವನ್ನು ಅರಿಯೋಣ.

ಭಾರತದ ಸ್ವಾತಂತ್ರ್ಯ ದಿನಾಚರಣೆ : ಪ್ರತಿ ವರ್ಷ ಆಗಸ್ಟ್ 15 ರಂದು ಆಚರಿಸಲಾಗುತ್ತದೆ. ಬ್ರಿಟೀಷರ ಕಪಿಮುಷ್ಟಿಯಿಂದ, ಭಾರತ ದೇಶ 1947 ಆಗಸ್ಟ್ 15 ರಂದು ಸ್ವಾತಂತ್ರ್ಯ ತೇಯ ಉದಯವಾಯಿತು. ಅರ್ಥಾತ್ ಸ್ವತಂತ್ರವಾಯಿತು. ಪ್ರತಿ ವರ್ಷ ದೇಶದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನವನ್ನಾಗಿ ಮತ್ತು ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಭಾರತ ತುಂಬೆಲ್ಲಾ ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಗುತ್ತದೆ. ದೇಶದ ಎಲ್ಲಾ ಕಡೆ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಹಾಗೂ 370 ಕಲಂ ರದ್ದುಗೊಂಡ ಪ್ರಯುಕ್ತ ಕಾಶ್ಮೀರದಲ್ಲಿಯೂ ಸಹ ಈ ಬಾರಿ ತ್ರಿವರ್ಣ ದ್ವಜ ಹಾರಿಸಲಾಗುತ್ತದೆ ಹಾಗೆ ಅದೇ ರೀತಿ ಕಾಶ್ಮೀರ ಕಣಿವೆಯ ಪ್ರತಿಯೊಂದು ಹಳ್ಳಿಯಲ್ಲಿಯೋ ತಿರಂಗ ದ್ವಜ ಹಾರಾಡಲಿದೆ.

ಆಚರಣೆಯ ಪ್ರಮುಖ ಸಮಾರಂಭ :

ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ “ಜನ ಗಣ ಮನ”ವನ್ನು ಹಾಡುವ ಮೂಲಕ ರಾಷ್ಟ್ರಕ್ಕೆ ಗೌರವವನ್ನು ಸಲ್ಲಿಸುವುದರ ಜೊತೆ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡುತ್ತಾರೆ. ಅಲ್ಲದೆ ಕೆಲವು ಪ್ರಗತಿ ಯೋಜನೆಗಳನ್ನು ಸಹ ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ವೀರ ಬಲಿದಾನಗೈದ ನಾಯಕರನ್ನು ಸ್ಮರಿಸಲಾಗುತ್ತದೆ.

ಸ್ವಾತಂತ್ರ್ಯಕ್ಕಾಗಿ ದೇಶಭಕ್ತ ಮಹನೀಯರಾದ ವಲ್ಲಬಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ,
ಮಹಾತ್ಮಾ ಗಾಂಧಿ, ಭಗತ್ ಸಿಂಗ್, ಬಾಲಗಂಗಾಧರ ತಿಲಕ್ ರು ಸೇರಿ ಇನ್ನು ಲಕ್ಷಾಂತರ ದೇಶಪ್ರೇಮಿಗಳು ಹೋರಾಡಿದ್ದಾರೆ. ಅವರು ಹೋರಾಡಿ ಪ್ರಾಣ ಬಿಟ್ಟ ಕಾರಣದಿಂದ ಇಂದು ನಮಗೆ ಆಜಾದಿ ದೊರಕಿದೆ ಎಂಬುವುದು ಪ್ರತಿಯೊಬ್ಬ ಭಾರತೀಯರು ಅರ್ಥಮಾಡಿಕೊಳ್ಳಬೇಕಾಗಿದೆ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಸಂಪೂರ್ಣ ಬದುಕನ್ನೇ ಮುಡಿಪಾಗಿಟ್ಟು ಹೋರಾಟ ನಡೆಸಿ, ಪ್ರಾಣ ತ್ಯಾಗ ಮಾಡಿ ಹುತಾತ್ಮರೆನಿಸಿದ್ದಾರೆ. ಹಾಗಾಗಿ ಇಂದು ನಾವು ಅವರನ್ನು ಅತ್ಯಂತ ಗೌರವದಿಂದ ನೆನೆಸುತ್ತಾ ಅವರ ಜೀವನದ ತ್ಯಾಗಕ್ಕೆ ಶಿರಬಾಗಿ ಸ್ಮರಿಸುತ್ತಾ, ನಾವು ಈ ಸ್ವಾತಂತ್ರ್ಯವನ್ನು ಆಚರಿಸುತ್ತೇವೆ ಮತ್ತು ಆಚರಿಸೋಣ.

ಅಭಿವೃದ್ಧಿ ಪಥದಲ್ಲಿ ಭಾರತ :

ನಮ್ಮ ದೇಶ ಇಂದು ವಿಶ್ವದಲ್ಲೇ ಅತಿ ಹೆಚ್ಚು ಯುವಕರನ್ನು ಹೊಂದಿದ್ದು ಬೇರೆ ದೇಶಗಳಿಗಿಂತ ಶ್ರೀಮಂತ ದೇಶವಾಗಿದೆ, ಹಾಗೂ ಪ್ರಬಲವೆನಿಸಿದೆ. ಹೀಗಾಗಿ ಪ್ರತಿಯೊಬ್ಬ ನಾಗರಿಕರು ಸಹ ದೇಶಕ್ಕೆ ಒಳಿತಾಗುವ ದಿಸೆಯಲ್ಲಿ ಆಲೋಚನೆ, ವಿಚಾರಗಳನ್ನು ಮಾಡಿಕೊಂಡು ಅದಕ್ಕೆ ಸರಿಯಾಗಿ ಎಲ್ಲರೂ ಒಂದಾಗಿ ಕಾಯಕ ಮಾಡುವ ಮೂಲಕ ಶ್ರಮಿಸಿದರೆ ಭಾರತವು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಸಾಗಿ ಜಗತ್ತಿನ ನಂಬರ್ -1, ದೇಶವಾಗುವುದರಲ್ಲಿ ಅನುಮಾನವೇ ಇಲ್ಲ. ಆದ್ದರಿಂದ ಪ್ರಸ್ತುತ ನಮ್ಮಲ್ಲಿ ಇರುವ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸುವ ದಿಸೆಯಲ್ಲಿ ಮುಂದಾಗೊಣ, ಬಾಹ್ಯಾಕಾಶ, ಕ್ರೀಡೆ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಹೊಸ ಹೊಸ ಮೈಲುಗಲ್ಲನ್ನು ಸ್ಥಾಪಿಸುತ್ತಾ ಮುಂದೆ ಸಾಗೋಣ, ಕೃಷಿ, ಪರಿಸರ ಸಂರಕ್ಷಣೆ, ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳ ನೀಲಿನಕ್ಷೆಯ ಯೋಜನಗಳು ಜಾರಿಗೆ ತರುವ ಪ್ರಯತ್ನ ಮಾಡುವುದು ಮತ್ತು ಸ್ವಚ್ಛ ಭಾರತ್, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಗಳಂತಹ ಯೋಜನೆಗಳು ಯಶಸ್ವಿಯಾಗಿ ಸಾಗುತ್ತಿರುವುದು ಹೆಮ್ಮೆಯ ವಿಚಾರ ಆದ್ದರಿಂದ ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿದ ನಾವೇ ಧನ್ಯರು ಎನ್ನುತ್ತಾ ಭವಿಷ್ಯದ ದಿನಗಳಲ್ಲಿ ಭಾರತ ಇಡೀ ಜಗತ್ತಿನ ಅಧಿಪತಿಯಾಗಲಿ ಎಂದು ಈ 73 ಸ್ವಾತಂತ್ರ್ಯ ದಿನಾಚರಣೆಯ ಸಂಧರ್ಭದ ಸವಿನೆನಪಿಗಾಗಿ ಆಶಿಸುತ್ತೇನೆ.

ಲೇಖನ | 73 ನೇ ಸ್ವಾತಂತ್ರ್ಯೋತ್ಸವದ ಸವಿನೆನಪು...| ಸಂಗಮೇಶ ಎನ್ ಜವಾದಿ

-ಸಂಗಮೇಶ ಎನ್ ಜವಾದಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.