ಕೆ.ಎನ್.ಪಿ.ಕವಿತೆ;

ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ದೇವರಾಜ್ ನಿಸರ್ಗತನಯ ರವರ “ಧನದಾಹ..!” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಧನದಾಹ..!

ಬೆಟ್ಟವ ನುಂಗಿ ಗುಡ್ಡಕ್ಕೆ
ಹಾತೊರೆಯೊ ಬಕಾಸುರರ ಹಸಿದ ಹೊಟ್ಟೆಗೆ ಬೆಟ್ಟ ಗುಡ್ಡಗಳೇ ಮಾಯ!

ಕಲ್ಲು ಗಣಿಗಾರಿಕೆಯ ಕರಾಳ ಮುಖ
ಕ್ರಷರ್ಗಳಾರ್ಭಟದ ಹಸಿವಿಗೆ
ಬೆಟ್ಟಗಳನೆ ನುಂಗಿ ನೀರ್ಕುಡಿದು
ನೆಮ್ಮದಿಯಲಿ ತೇಗುವ ಕಾಯ!

ಖಾಲಿಯಾದರೂ ನಿಲ್ಲದು
ಉಳ್ಳವರ ಸ್ವಾರ್ಥದ ಹಸಿವು
ಕುರುಡು ಕಾಂಚಾಣದ ಮೋಹ
ತೀರದು ಗಣಿಧಣಿಗಳ ಧನದಾಹ!

ಕಲ್ಲುಚಪ್ಪಡಿ ಬಂಡೆಗಳ ಕೊಯ್ದು
ಗ್ರಾನೈಟ್ ಮಾಡಿ ನುಣಪ ಕೊರೆದು
ದೇಶ ವಿದೇಶಗಳಿಗೆ ಮಾಡಿ ರಫ್ತು
ಗುಟ್ಟಾಗಿ ಸಂಪಾದಿಸಿದ ಕಪ್ಪುಹಣ
ಚುನಾವಣೆಯ ಮತಖರೀದಿಗೆ !

ಅಧಿಕಾರ ಹಿಡಿದವರಿಗೇನು ಗೊತ್ತು
ಪರಿಸರ ನಾಶದ ಪರಿಣಾಮ ?
ಆಗುತಿದೆಯಲ್ಲ ಪ್ರಕೃತಿ ನಿರ್ನಾಮ !
ಧನದಾಹಿಗಳ ಸ್ವಾರ್ಥಕ್ಕೆ
ಅಮಾಯಕ ಜೀವ ಸಂಕುಲ ಬಲಿ !

ಪರಿಸರವಿದ್ದರೆ ನಾವು
ಪರಿಸರವಿಲ್ಲದಿರೆ ಸಾವು !
ಈ ಸತ್ಯವನರಿಯದಲೆ
ಜೀವಸಂಕುಲಕ್ಕುಳಿವಿಲ್ಲ !
ಮುಂದೊಂದು ದಿನ ನಾವು ನೀವು
ಎಲ್ಲರೂ ಮಟಾಮಾಯ !
ಈಗಲಾದರೂ ಎಚ್ಚೆತ್ತುಕೋ ಮಹರಾಯ!!

-ದೇವರಾಜ್ ನಿಸರ್ಗತನಯ
ಬಂಗಾರಪೇಟೆ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.