ಕೆ.ಎನ್.ಪಿ.ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ.ಕವಿತೆ ವಿಭಾಗದಲ್ಲಿ ಹಿರಿಯ ಕವಿ ಎ.ಎಸ್.ಮಕಾನದಾರ ಅವರ ಸಮಗ್ರ ಕವಿತೆಗಳ ಹೊತ್ತಿಗೆ ಅಕ್ಕಡಿಸಾಲು ಕೃತಿಯಲ್ಲಿನ ‘ಎದೆಯೊಳಗಿನ ಹಣತೆ’ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿರಿ, ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…. 

ಎದೆಯೊಳಗಿನ ಹಣತೆ

ದೀಪಾವಳಿಯ
ದೀಪ ಬೆಳಗೋದಂದ್ರ
ಯಾವುದೋ ಪಣತಿಯಲಿ
ಯಾರದೋ ಎಣ್ಣೆ ಹಾಕಿ
ಯಾರೋ ಹೊಸೆದ ಬತ್ತಿಯಿಂದ
ನಮ್ಮ ನಾಯಕರು
ದೀಪ ಹಚ್ಚಿದಾಂಗಲ್ಲ
ನಮ್ಮ ಮನದಲ್ಲಿ ಅಡಗಿದ
ಅಜ್ಞಾನವೆಂಬ ಕೊಳೆಯನ್ನು
ಪವಿತ್ರ ಆತ್ಮವೆಂಬ ಪಣತಿಯಲ್ಲಿ
ಶ್ರಮವೆಂಬ ತೈಲವ ಹಾಕಿ
ಕಾಯಕವೆಂಬ
ಬತ್ತಿಯನ್ನು ಹೊತ್ತಿಸುವ
ಜ್ಯೋತಿಯೇ ದೀಪಾವಳಿ

-ಎ.ಎಸ್.ಮಕಾನದಾರ

ಕೆ.ಎನ್.ಪಿ.ಯ ಸಮಸ್ತ ಓದುಗ ಬಳಗಕ್ಕೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು…

ಬೆಳಕಿನ ಹಬ್ಬ ನಿಮಗೆ ಸುಖ, ಸಂಪತ್ತು, ನೆಮ್ಮದಿ ಕರುಣಿಸಲಿ. ನಿಮ್ಮ ಜೀವನ ಸಮೃದ್ಧಿಯ ಹಾದಿಯಲ್ಲಿ ಸಾಗಲಿ….. ದೀಪದಂತೆ ನಿಮ್ಮ ಬದುಕೂ ಪ್ರಕಾಶಮಾನವಾಗಿರಲಿ. ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಜೀವನ ಉಜ್ವಲವಾಗಲಿ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.