ಕೆ.ಎನ್.ಪಿ.ಕವಿತೆ;

ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆ ದೇವರಾಜ್ ನಿಸರ್ಗತನಯ ರವರ “ವೀರಯೋಧರಿಗೆ ವಂದನೆ..!!” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ವೀರಯೋಧರಿಗೆ ವಂದನೆ..!!

ಕಾರ್ಗಿಲ್ಲ ರಣರಂಗದಲಿ
ಕಾದಾಡುತಿಹ ಕೆಚ್ಚೆದೆಯ
ವೀರಯೋಧರೆ ನಿಮಗಿದೋ ವಂದನೆ
ಕೋಟಿ ವಂದನೆ !

ಕೊರೆವ ಚಳಿ, ಬೀಸುವ ಬಿರುಗಾಳಿ
ಗುಂಡು ಬಾಂಬುಗಳ ಸುರಿಮಳೆಗೆ
ಅಂಜದಳುಕದೆ ಮುನ್ನುಗ್ಗುವ ಹೆಮ್ಮೆಯ ವೀರಯೋಧರೆ ನಿಮಗಿದೋ ವಂದನೆ
ಕೋಟಿವಂದನೆ !

ಪಾಕಿಗಳತಿಕ್ರಮಣಕ್ಕೆ ತಡೆಯೊಡ್ಡಿ
ಕಾಶ್ಮೀರಕಾಗಿ ನಿಮ್ಮೆದೆಯನ್ನೊಡ್ಡಿ
ಭಾರತಾಂಬೆಯ ಮುಕುಟ
ಕಾಪಾಡಲು ಹೆಣಗುತಿರುವ ವೀರಯೋಧರೆ ನಿಮಗಿದೋ ವಂದನೆ
ಕೋಟಿ ವಂದನೆ !

ಹೆತ್ತ ತಾಯಂತೆ ಭಾರತಿ
ಕೆಚ್ಚೆದೆಯ ವೀರ ಜನನಿ
ಜನ್ಮದಾತೆಯ ಮಾನವುಳಿಸಲು
ಬೆಚ್ಚದೆ ಬೆದರದೆ ಬಗ್ಗದೆ ಕುಗ್ಗದೆ
ವೈರಿಗಳ ಅಟ್ಟಾಡಿಸುತಿಹ
ವೀರಯೋಧರೆ ನಿಮಗಿದೋ ವಂದನೆ
ಕೋಟಿ ವಂದನೆ !

ಶಾಂತಿ ಪ್ರಿಯರು ನಾವು
ಕೆಣಕಿದರೆ ಕೆರಳಿದ ಕೇಸರಿಗಳು
ಭಾರತೀಯರೆಂದೂ
ಧೈರ್ಯ ಸಾಹಸಕೆ ಮುಂದು
ನಡೆಯದು ದುರುಳರಾಟ
ನಮಗಿದೆ ಜಯದ ನಾಗಾಲೋಟ
ದೇಶಕ್ಕಿಂತ ಮಿಗಿಲಿಲ್ಲವೆಂದರಿತು
ಪ್ರಾಣಾರ್ಪಣೆಗೈಯುತಿಹ
ವೀರಯೋಧರೆ ನಿಮಗಿದೋ ವಂದನೆ
ಶತಕೋಟಿ ಭಾರತೀಯರ
ಹೃದಯಾಭಿವಂದನೆ !!

-ದೇವರಾಜ್ ನಿಸರ್ಗತನಯ
ಬಂಗಾರಪೇಟೆ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.