ಕೆ.ಎನ್.ಪಿ, ಕವಿತೆ;

ಆತ್ಮೀಯರೇ, ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಬಸವರಾಜ ಕಾಸೆರವರ “ವಯ್ಯಾರದ ಅಚ್ಚು” ಕವಿತೆಯನ್ನು ಪ್ರಕಟಿಸಲಾಗಿದೆ…ಓದಿರಿ..ತಮ್ಮ ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ವಯ್ಯಾರದ ಅಚ್ಚು

ನಿನ್ನ ಶೃಂಗಾರದ ಕುರಿತು ನನ್ನಲ್ಲಿಯೇ
ಅವೆಷ್ಟೋ ಇವೆ ನೂರು ಕಥೆಗಳು
ಇರಲಿರಲಿ ನೀ ಶೃಂಗಾರಗೊಳ್ಳು ಇನ್ನೊಂದಿಷ್ಟು|
ಆಗಸಕ್ಕೂ ಕಿಚ್ಚು ಏರುವ ರಸಮಯ ಪದಗಳು
ಬಿತ್ತುವಂತೆ ಕಲ್ಲೆದೆಯ ಗುಡ್ಡದ ಮೇಲೂ
ಮೊಳಕೆಯೊಡೆಯಲಿ ಹಸಿರಾಗಿ ಮತ್ತೊಂದಿಷ್ಟು||

ನೀ ಅಲಂಕಾರಕ್ಕೆ ತೆಗೆದುಕೊಳ್ಳುವ ಸಮಯ
ಹನಿ ಮಿನಿ ನಗೆಗಳ ಗಿರಗಿಟ್ಲೆ ಅದರ ಸುತ್ತ
ಬೀಗಲಿ ಬಿಡು ಖುಷಿ ಅಲ್ಲಿಲ್ಲಿ ಎಲ್ಲೆಲ್ಲಿಯೂ|
ಅಂದುಕೊಳ್ಳದೆ ಕೇಳಿಸಿಕೊಂಡು ಏನನ್ನೂ
ತಯಾರಾಗದಿರು ಬೇಗ ಅವಸರ ಅವಸರವಾಗಿ
ನರ್ತಿಸಲಿ ಸಂಭ್ರಮ ಒಡಮೂಡಿ ನಿನ್ನಲ್ಲಿಯೂ||

ಕನ್ನಡಿಗೂ ಹತ್ತಿದೆ ವಯ್ಯಾರದ ಅಚ್ಚು
ಹಚ್ಚಿಕೊಂಡು ಪಡುತ್ತಿದೆ ನಿತ್ಯ ಪಾಡು
ಮೆಚ್ಚಿಸಲು ನಿನ್ನ ಕರೆದೊಯ್ಯುವುದು ಬರಸೆಳೆದು|
ಇದಾ ಕೇಳಿ ನೀ ನುಲಿಯುವ ವೇಳೆ
ಹೆಚ್ಚಾಗಿ ಸಂಕೋಚ ಹೇಳದೆ ಲಜ್ಜೆಗೂ
ಬರಬರಲಿ ತುಂಬಿ ಅಂದವು ಜಿಗಿಜಿಗಿದು||

ನಾ ಗುನುಗಿದರೂ ಆಗಾಗ ಏನೇನು
ಏರುತ್ತಿಹುದು ಮಿಡಿತ ರೋಮದಲ್ಲಿಯೂ
ಅಭಿಮಾನದ ಕಾವುಗಳ ಪುಳಕದ ಸಾಲುಗಳಿವು|
ಇರಲಿರಲಿ ನೀ ಸೌಂದರ್ಯದ ರಾಣಿ
ನರನಾಡಿಯ ಅಣು ಕಣದಲ್ಲಿಯೂ
ತುಂಬಿ ಏಳುತ್ತಿರಲಿ ಆತ್ಮವಿಶ್ವಾಸದೊಲವು||

-ಬಸವರಾಜ ಕಾಸೆ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.