ಕೆ.ಎನ್.ಪಿ.ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಕವಿ ಬಸವರಾಜ ಕಾಸೆ ಅವರು ರಚಿಸಿದ “ತಂದೆಯೊಬ್ಬನ ಬಯಕೆ” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ತಂದೆಯೊಬ್ಬನ ಬಯಕೆ

ಧೈರ್ಯ ಸಾಹಸಗಳಿಂದ
ಕ್ಷಣ ಕ್ಷಣವೂ ಹುರಿದುಂಬಿ
ಗಂಡೆದೆಯ ಗುಂಡಿಗೆ
ಕಣ ಕಣದಲ್ಲಿಯೂ ತುಂಬಿ
ದೇಶಭಕ್ತಿಯ ಎಲ್ಲೆಡೆ ಪಸರಿಸಿ
ಹೆಮ್ಮೆಯಿಂದ ಬೆಳೆಸುವೆ ನಾನು
ಓ ಭಾರತಾಂಬೆಯ ಕುಡಿಯೇ
ವೀರಯೋಧನೇ ಆಗಬೇಕು ನೀನು

ಮನವನ್ನು ಹುರಿಗೊಳಿಸಿ
ಉಕ್ಕಿನ ದೇಹವ ಪಡೆ
ಹಿಂತಿರುಗಿ ನೋಡದೆ
ಸರ್ವಸನ್ನದನಾಗಿ ಮುನ್ನಡೆ
ಏನೇ ಇರಲಿ ನೋವು
ಕುಟುಂಬವೇನಿದ್ದರೂ ಆಮೇಲೂ
ಅಲ್ಲಿ ಆದಾರಾಗಲಿ ಕಷ್ಟ
ದೇಶವೇ ಮೊದಲು

ಮದ್ದುಗುಂಡು ಶೆಲ್ಗಳ ದಾಳಿ
ಆದರೂ ನಿತ್ಯದ ಸುಪ್ರಬಾತ
ಮೈ ಕೊರೆಯುವ ಚಳಿಯಲ್ಲೂ
ಹರಿದರಿದು ಕುದಿಯುತ್ತಿರಲಿ ರಕ್ತ
ಸುರಿಮಳೆಯಾಗಿ ಭೂಕುಸಿತವಾದರೂ
ಮಂಜುಗಟ್ಟಿ ಹಿಮವೇ ಸುರಿದಷ್ಟು
ನಿರಂತರ ಕಠಿಣವಾಗುತ್ತಿರು
ನೀ ಅಲುಗದೆ ಆಗದಷ್ಟು

ಸ್ವಾರ್ಥ ಲಾಭಾಸೆಗಳ ಬಿಟ್ಟು
ಸಕಲ ವ್ಯಾಮೋಹಗಳ ಮೆಟ್ಟು
ಇಂವ ನಮ್ಮವನೆನ್ನುವಂತೆ
ಪ್ರತಿ ಭಾರತೀಯರ ಎದೆಯನ್ನು ತಟ್ಟು
ಅಡ್ಡಿಯಿಲ್ಲ ಪ್ರಾಣವೇ ಹೋದರೂ
ಚರಿತ್ರೆಯೇ ಆಗಬೇಕು ಸಾವು
ನಿನ್ನಂತಹ ಮಗನ ಹೆತ್ತ
ಪುಣ್ಯವಂತರೇ ಆಗಬೇಕು ನಾವು

ಬಸವರಾಜ ಕಾಸೆ

ಮು| ಪೋ| ದೇವಾಪೂರ
ತಾ| ಜಿ| ವಿಜಯಪುರ
ಪಿನ್ ಕೋಡ್ 586125
ಮಿಂಚಂಚೆ pradeepbasu40@gmail.com
ಸಂಪರ್ಕ ಸಂಖ್ಯೆ 7676583771 ಮತ್ತು 7829141150

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.