ಕೆ.ಎನ್.ಪಿ,ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಬಸವರಾಜ ಕಾಸೆರವರ “ರೈತನ ಕಣ್ಣೀರು” ಕವಿತೆಯನ್ನು ಪ್ರಕಟಿಸಲಾಗಿದೆ…ಸಹೃದಯರು ಕವಿತೆ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ರೈತನ ಕಣ್ಣೀರು

ರೈತ ದೇಶದ ಬೆನ್ನೆಲುಬು
ಎಂದು ಭಾಷಣ ಬೀಗಿದರೆ ಸಾಕೆ|
ನೋವುಗಳೇ ಗುಡುಗಿ ರೈತನ ಕಣ್ಣೀರು
ಮಳೆಯಾಗಿ ಹರಿಯುವುದು ಯಾಕೆ||
ಮೂರು ಹೊತ್ತು ಅನ್ನವೇ ಬೇಕು
ಪ್ರತಿಯೊಬ್ಬರ ಬದುಕಿನ ನಾಳೆಗೆ|
ಧಾವಿಸಿ ಬನ್ನಿರಿ ಎಲ್ಲರೂ
ಒಗ್ಗಟ್ಟಾಗಿ ಭವಿಷ್ಯದ ಏಳ್ಗೆಗೆ||
ಮುಗಿಲು ಮುಟ್ಟುವವರೆಗೂ ಕಾವು
ಹೋರಾಡಿ ಶ್ರಮದ ಗೆಲುವಿಗೆ|
ಅನ್ಯಾಯ ದೌರ್ಜನ್ಯಗಳ ತಡೆಗೆ
ನಿಲ್ಲಿ ನೇಗಿಲ ಯೋಗಿಯ ನೆರವಿಗೆ…

ಒಪ್ಪತ್ತು ಗಂಜಿಗೆ ದಿನವಿಡೀ ದುಡಿದು
ಬೆವರಲ್ಲಿ ಮೈ ಬಸಿಯುತ್ತಿರುವನು|
ಕೇಳುವವರಿಲ್ಲದೆ ಇವನ ಪಾಡು
ಹಾಡುಹಗಲೇ ಕುಸಿದು ಕುಳಿತಾನು||
ಕೀಟನಾಶಕ ರಸಗೊಬ್ಬರ
ವಿದ್ಯುತ್ ನೀರು ದುಬಾರಿ ಪರಿಕರ|
ಭರವಸೆ ನೀಡಿದ ಸರಕಾರ
ಸಹಾಯಧನ ಕಡಿತಗೊಳಿಸಿ ಹರೋಹರ||
ಕಷ್ಟ ನಷ್ಟಗಳ ಆಗರ
ಜೀವನವೇ ಇಲ್ಲಿ ಅತಿ ಭಾರ|
ಪ್ರತಿಭಟಿಸಿ ಸಿಡಿದೆದ್ದು ನಿಂತರೆ ರೈತ
ನಾಡಿಗೆ ನಾಡೇ ಹಾಹಾಕಾರ…

ಅತಿವೃಷ್ಟಿ ಅನಾವೃಷ್ಟಿ|
ಬಡತನವೇ ಇಲ್ಲಿ ಪಿತ್ರಾರ್ಜಿತ ಆಸ್ತಿ ||
ಅಸ್ಥಿರ ಮಾರುಕಟ್ಟೆಯ ವಸತಿ
ವೈಜ್ಞಾನಿಕ ಸಂಸ್ಕರಣೆಯು ನಾಸ್ತಿ||
ಖರ್ಚು ವೆಚ್ಚವಾಗಿ ಅಗಣಿತ
ಬೆಂಬಲ ಬೆಲೆಯಿಲ್ಲದೆ ಅತ್ತಿತ್ತ|
ಮಧ್ಯವರ್ತಿಯ ಹಾವಳಿ ವಿಪರೀತ
ರಾಜಕೀಯ ಇಚ್ಛಾಶಕ್ತಿಗಿದೆ ಕೊರೆತ||
ಬರಗಾಲದ ಬರೆ
ತಾಳದ ಭಾದೆ ಸಾಲದ ಮೊರೆ|
ದೀರ್ಘಕಾಲ ಕಿರುಕುಳದ ಹೊರೆ
ಕೃಷಿ ಪ್ರಗತಿಗೆ ಓಗೊಡಲಿ ಈ ಕರೆ….

ಬಸವರಾಜ ಕಾಸೆ
ಮು| ಪೋ| ದೇವಾಪೂರ
ತಾ| ಜಿ| ವಿಜಯಪುರ
ಪಿನ್ ಕೋಡ್ 586125
ಮೊಬೈಲ್ ಸಂಖ್ಯೆ 7829141150
ಮಿಂಚಂಚೆ pradeepbasu40@gmail.com

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.