ಕೆ.ಎನ್.ಪಿ.ಕವಿತೆ,ಜು.06;
ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ ಕವಯತ್ರಿ ಜಯಶ್ರೀ ಭ.ಭಂಡಾರಿ ಅವರ ಕವಿತೆ ಪ್ರಕಟಿಸಲಾಗಿದೆ.
ಸಹೃದಯರು ಕವಿತೆ ಓದಿ ತಮ್ಮಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.
ಒಲುಮೆ ಸಿರಿಯೇ
ನಿನ್ನ ನೋಡಿದಾಗಿಂದ ಕಣ್ಣುಗಳಿಗಿಲ್ಲ ನಿದ್ದೆ
ಮುದ್ದಿನ ಗಿಣಿಯೇ ಎಲ್ಲಿಂದ ಬಂದೆ
ಕನಸುಗಳಿಗೆಲ್ಲ ನಿನ್ನದೆ ಸಂಭ್ರಮ
ಹೃದಯ ವೀಣೆಯಲಿ ನಿನ್ನದೆ ನವಗಾನ
ಅದೆಂತದೋ ತಣಿಯದ ತವಕ
ಮನಸಿನ ಮನಿಯದ ಸಿಹಿತುಡಿತ
ಹೇಳಲಾರೆ,ಅನುಭವಿಸಲಾರೆ ಚಲುವೆ
ಬಾಚಿತಬ್ಬುವ ಹಂಬಲದ ಹಸಿವೋ
ಇಳೆಯ ಕಳೆಯ ಹೊತ್ತ ನವಕನ್ನಿಕೆಯೆ
ದೇವನೆ ಪುರುಷೊತ್ತಿನಿಂದ ತಿದ್ದಿದ ಗೊಂಬೆಯೆ
ಮೋಡಗಳ ಮಾಲೆಯಿಂದ ಇಳಿದ ಪರಿಯೆ..
ನಿನ್ನನೆ ನೋಡಬೇಕೆನ್ನುವ ಹಸಿವ ಹಿಂಗಿಸು ಬಾ
ಕಾದುಸುಸ್ತಾದ ಕಮಂಗಿಗೆ ಒಲವಾಗು
ಜೇನಧಾರೆಯಾಗು ಕನಕಾಂಗಿಯೆ
ಪ್ರೀತಿಯೆಂಬ ಹಸಿವೆಯ ನೀಗುಬಾ ಕೋಮಲೆ
ಮುಂಗುರುಳ ಮುದ್ದಿಸಿ ತೋಳಲಿ ಬಂಧಿಸುವೆ
ನವಿಲೂರಿನ ನವಿಲೆ ನೀನಿಲ್ಲದೆ ಬದುಕಿಲ್ಲ
ಶಬರಿಯಂತೆ ನೀ ಬರುವ ದಾರಿಗೆ ಕಣ್ಣಾಗಿರುವೆ
ಚಲುವೆಲ್ಲ ನಿನ್ನಲೆ ಸೂರೆಗೊಂಡಿಹ ಜಾಣೆ
ಮೃದುಮಾತು ಕಳ್ಳನೋಟ ಹುಸಿಮುನಿಸ ಕೂಸೆ
ನಿನ್ನ ನೋಡದೆ ಹಸಿಯಲ್ಲ ಈ ಜೀವ
ಪದಪದ ಸೇರಿ ಪಲ್ಲವಿಯಾದವಳೆ ಹುಸಿಯಲ್ಲ ಮಾತು
ಒಲುಮೆಯ ಪೂಜೆಯ ಅರಾಧನೆಗೆ ಕಾದಿರುವೆ
ಮುಖತೋರು ಮುದ್ದಿನ ಸಿರಿಗೌರಿ ನೀಗು ಬಾಳಹಸಿವೆ..
ಜಯಶ್ರೀ ಭ.ಭಂಡಾರಿ
ಅಧ್ಯಾಪಕಿ ಹಾಗೂ ಕವಯಿತ್ರಿ.
ಬಾದಾಮಿ
ಜಯಶ್ರೀ ಭ.ಭಂಡಾರಿಯವರ ಇತರ ಕವಿತೆಗಳು
http://karnatakanewsportal.com/kavite-sambhramakkella-nee-karana-jayashree-bha-bhandari/
ನಿಮ್ಮ ಕವಿತೆಗಳನ್ನು ಕೂಡ ಕಳುಹಿಸಬಹುದು.
9513326661
ನೀವು ಕೂಡ ಬರೆಯಬಹುದು :
ಆತ್ಮೀಯರೇ ಕೆ.ಎನ್.ಪಿ.ಯಲ್ಲಿ ನೀವು ಕೂಡ ಬರೆಯಬಹುದಾಗಿದೆ. ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆಯಿರಿ, ಕೆ.ಎನ್.ಪಿ.ಗೆ ಕಳುಹಿಸಿರಿ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.