ಕೆ.ಎನ್.ಪಿ.ಕವಿತೆ;

ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ದೇವರಾಜ್ ನಿಸರ್ಗತನಯ ರವರ “ಓದ್ರೋ ಹುಡುಗ್ರಾ..!” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಓದ್ರೋ ಹುಡುಗ್ರಾ..!

ಓದೋ ಟೈಂಮಲ್ ಪ್ರೀತಿ ಅಂತ
ಗುದ್ದಾಡ್ತೀರಲ್ಲೋ !
ಪ್ರೀತಿಸ್ದೋರು ಕೈ ಕೊಟ್ಟಾಗ
ಒದ್ದಾಡ್ತೀರಲ್ಲೋ !!

ಪ್ರೀತಿ ಅನ್ನೋ ಮಾಯಾಜಿಂಕೆ
ಹಿಡಿಯಕ್ ಹೋಗ್ತೀರೊ !
ಕೈಗೆ ಸಿಗದೇ ಮಾಯವಾದ್ರೆ
ಬಾಯಿ ಬಾಯಿ ಬಿಡ್ತೀರೋ..!!

ಅಪ್ಪ ಅಮ್ಮನ್ ಕಣ್ತಪ್ಸಿ ನೀವ್
ಸಿನಿಮಾಗೋಗ್ತೀರೋ !
ಕ್ಲಾಸಿಗೆ ನೀವು ಬಂಕ್ ಹೊಡ್ದು
ಪಾರ್ಕು ಸುತ್ತೀರೋ..!!

ರಾತ್ರಿ ಆದ್ರೂ ಪಾರ್ಟಿ ಮಾಡ್ಕೊಂಡ್
ಮನೇಗೆ ಬರ್ತೀರೋ..!
ಅಮ್ಮ ಮಾಡಿದ್ ಅಡುಗೆ ನೋಡಿ
ಉರ್ಕೊಂಡ್ ಬೀಳ್ತೀರೋ..!!

ಕಾಲೇಜಲ್ಲಿ ಹೀರೋಯಿಸಂ
ತೋರ್ಸೋಕ್ಕೋಗ್ತೀರೋ !
ಅಪ್ಪ ಅಮ್ಮಂಗ್ ನಿಜವಾದ ವಿಲನ್
ನೀವೇ ಆಗ್ತೀರೋ…!!

ಸದಾ ಕೈಯಲ್ ಮೊಬೈಲ್ ಹಿಡ್ಕೊಂಡ್
ಚಾಟಿಂಗ್ ಮಾಡ್ತೀರೋ !
ಫ್ರೆಂಡ್ಸು ಜೊತೇಗ್ ಎಲ್ಲಂದ್ರಲ್ಲಿ
ಡೇಟಿಂಗ್ ಹೋಗ್ತೀರೋ !!

ಜವಾಬ್ದಾರಿ ಮರೆತು ಸಮಯ
ವೇಸ್ಟು ಮಾಡ್ತೀರೋ !
ಪರೀಕ್ಷೇಲಿ ಬರಿಯೋಕಾಗ್ದೆ
ಡುಮ್ಕಿ ಹೊಡಿತೀರೋ..!!

ಫೇಲಾದ್ಮೇಲೆ ಮನೇಲ್ ಕೂತ್ಕೊಂಡ್
ಪೇಚಾಡ್ಕೋತೀರೋ !
ಪ್ರೀತ್ಸಿದ್ ಹುಡ್ಗಿ ಕ್ಯಾರೆ ಅನ್ನದೇ
ದೇವದಾಸ್ ಆಗ್ತೀರೋ !

ಓದೋ ವಯಸಲ್ ನಿಯತ್ತಾಗಿ
ಓದ್ಬೇಕು ಕಣ್ರೋ..!
ಅಪ್ಪ ಅಮ್ಮನ್ ಆಸೇನಾದ್ರೂ
ಈಡೇರಿಸ್ಬೇಕಲ್ರೋ..!!

ಹೋದ ಸಮಯ ಮತ್ತೆ ಹಿಂದೆ
ಬರೋಲ್ಲ ನೋಡ್ರೋ !
ಕೆಟ್ಟ ಮೇಲೆ ಬುದ್ಧಿ ಬಂದ್ರೇ
ಪ್ರಯೋಜ್ನ ಇಲ್ರೋ !!

ಇನ್ಮೇಲಾದ್ರೂ ಬುದ್ಧಿವಂತರಾಗಿ
ಚೆನ್ನಾಗ್ ಓದ್ಕೊಳ್ರೋ !
ನಿಮ್ ಕಾಲಮೇಲೆ ನೀವು ನಿಂತ್ಕಂಡ್
ಜೀವನಾ ಮಾಡ್ಕೊಳ್ರೋ..!!

ದೇವರಾಜ್ ನಿಸರ್ಗತನಯ

-ದೇವರಾಜ್ ನಿಸರ್ಗತನಯ
ಬಂಗಾರಪೇಟೆ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.