ಕೆ.ಎನ್.ಪಿ.ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಡಾ.ರೇಣುಕಾತಾಯಿ.ಎಂ.ಸಂತಬಾ (ರೇಮಾಸಂ) ಅವರ “ನಿಂಗಣ್ಣನ ಮುತ್ತು” ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ನಿಂಗಣ್ಣನ ಮುತ್ತು

ಜಲಲ ಜಲಲ ರುದ್ರ ಜಲಧಾರೆ ಹರಿಯುತಿಹುದು,
ಕೊಚ್ಚಿ ಕೊಚ್ಚಿ ಎಲ್ಲವನು ನುಂಗುತ ನುಗ್ಗುತಿಹುದು//

ನಿಂಗಣ್ಣನ ಮನೆಯೂ ಜರ್ರನೇ ಕುಸಿಯಿತಾಗಲೇ,,!
ಹೋಗಿ ಬಿಟ್ಟರು ! ಪಕ್ಕನೇ ಅವ್ವ ಅಪ್ಪ ಸೇರಿ ಎಲ್ಲ ಆಗಲೇ //

ನಿಂಗಣ್ಣನ ಬದುಕು ಬರ್ರನೇ ಬೆತ್ತಲಾಯಿತು !
ಕಣ್ಣೀರಧಾರೆಯಿಂದ ಕಣ್ಣೆಲ್ಲ ಒಮ್ಮೆಲೇ ಮಂಜಾಯಿತು,//

ನಿನಗೆ ನಾ, ಎನಗೆ ನೀನೆನುತ ಉಳಿದರಿಬ್ಬರೇ! ನಿಂಗ,ಮುತ್ತು,,
ನಡೆದ ನಿಂಗ ದುಃಖದ ನೀರಲ್ಲೇ! ಕರು ಮುತ್ತು ಹೊತ್ತು//

ಕವಿತೆ | ನಿಂಗಣ್ಣನ ಮುತ್ತು | ರೇಮಾಸಂ

ರೇಮಾಸಂ
ಡಾ. ರೇಣುಕಾತಾಯಿ ಎಂ ಸಂತಬಾ

http://karnatakanewsportal.com/kavite-bedike-bhaskara-remasam/

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.