ಕೆ.ಎನ್.ಪಿ,ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಬಸವರಾಜ ಕಾಸೆರವರ “ನೆನಪಾಗುವೆ ಯಾಕೆ ನನಗೆ” ಕವಿತೆ ಅನ್ನು ಪ್ರಕಟಿಸಲಾಗಿದೆ…ಸಹೃದಯರು ಕವಿತೆ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ನೆನಪಾಗುವೆ ಯಾಕೆ ನನಗೆ

ಮಡುವುಗಟ್ಟುವ ಕಣ್ಣಿನಲ್ಲಿ
ಬಿಂಬವಾಗಿ ನಿಲ್ಲುವೆ ನೀನು
ತಲ್ಲೀನನಾಗಿ ನಾನಾಗ
ಮತ್ತೆ ಮರೆಯುವೆ ಮರೆಯುವುದನ್ನು..
ಅಷ್ಟಕ್ಕೂ ನೀನು
ನೆನಪಾಗುವೆ ಯಾಕೆ ನನಗೆ
ಇಷ್ಟಕ್ಕೂ ಏನು
ಪಿಸುಗುಡುವೆ ಹೇಳದೆ ಒಳಗೆ..

ಕೋಪ ತಾಪ ಚಡಪಡಿಕೆ
ಅಂಗಲಾಚುವ ಮನವರಿಕೆಗಳು
ಎಲ್ಲವೂ ನಿನ್ನ ಪ್ರೀತಿಯ
ನನ್ನ ಸಾವಿರ ಮುಖಗಳು..
ಸುಮ್ಮನೆ ಧ್ಯಾನಿಸುತ್ತಾ
ಕಣ್ಣು ಮುಚ್ಚಿ ಕುಳಿತರೂ
ಬಂದಂತೆ ಆಗುವುದು
ಸದಾ ನೀ ನನ್ನೆದುರು..

ನಿನ್ನ ಆವರಿಸಿದ
ಆ ಕೆಂಪು ಚೂಡಿ
ತೂಗುಯ್ಯಾಲೆ ಆಡುವ
ಕೆಂಚು ಮುಂಗುರುಳ ಮೋಡಿ..
ಈ ಒರಟು ಕೈಗಳಲ್ಲಿ
ನಿನ್ನ ಪುಟ್ಟ ಅಂಗೈ
ಹಿಡಿದರೂ ಸಾಕು ಒಂಚೂರು
ಕಚಗುಳಿ ಆಗುವುದು ಮೈ..

ನಾವಿಟ್ಟ ಹೆಜ್ಜೆಯ ಗುರುತು
ಮೂಡಲಿಲ್ಲ ಕಲ್ಲುಬಂಡೆಯ ಮೇಲೂ
ನೆರೆಯಾಗಿ ಕೊಚ್ಚಿ ಹೋದರೂ
ಒರೆಸಲಾಗಲಿಲ್ಲ ನೆನಪುಗಳ ಆಮೇಲೂ..
ನಡೆದುದರ ಪರಾಮರ್ಶೆ
ಮುಂದೆ ನಡೆಯುವಂತೆ ಭಾಸ
ವಿನಾ ಕಾರಣ ಹಾಗೆ
ಸದ್ದಿಲ್ಲದೆ ಜೀವದ ಅಭ್ಯಾಸ..

ಬಸವರಾಜ ಕಾಸೆ
7829141150

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.