ಕೆ.ಎನ್.ಪಿ,ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಉಪನ್ಯಾಸಕಿ, ಬರಹಗಾರ್ತಿ ಜ್ಯೋತಿ ಬಳ್ಳಾರಿ ರವರ “ನಮ್ಮ ಕನ್ನಡ” ಕವಿತೆಯನ್ನು ಪ್ರಕಟಿಸಲಾಗಿದೆ…ಸಹೃದಯರು ಕವಿತೆ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ, ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ನಮ್ಮ ಕನ್ನಡ 

ಬೆಳಗಬೇಕು ಕನ್ನಡದ ಮನಸ್ಸುಗಳನ್ನು,
ನಮ್ಮ ಪ್ರೀತಿಯ ಕನ್ನಡದಿಂದ.

ಬೆಳೆಸಬೇಕು ನಮ್ಮ ಕನ್ನಡವ,
ನಮ್ಮ ಶ್ರದ್ಧೆ ಭಕ್ತಿಯಿಂದ,

ಕುವೆಂಪು, ಬೇಂದ್ರೆ ರಂತಹ ಕನ್ನಡ ರತ್ನಗಳಿಗೆ,
ಕೈ ಮುಗಿದು ವಂದಿಸಬೇಕು ಅವರ ಕನ್ನಡ ಸೇವೆಗಾಗಿ.

ಹೆಚ್ಚಿಸಬೇಕು ಕನ್ನಡದ ಕಿಚ್ಚನ್ನು,
ಇಂದಿನ ಯುವಪೀಳಿಗೆಯಲ್ಲಿ ಎಂದೆಂದಿಗೂ.

ನಮ್ಮ ಸಾಧನೆಯನ್ನು ಅರ್ಪಿಸಬೇಕು,
ನಮ್ಮ ತಾಯಿ ಶ್ರೀ ಭುವನೇಶ್ವರಿಯ ಪಾದಾರ ವೃಂದಗಳಿಗೆ.

ಹಾರಿಸಬೇಕು ಕನ್ನಡದ ಭಾವುಟವ,
ನಮ್ಮ ಕನ್ನಡ ಮನಸ್ಸುಗಳಿಂದ.

-ಜ್ಯೋತಿ ಬಳ್ಳಾರಿ

ಜ್ಯೋತಿ ಬಳ್ಳಾರಿ ರವರ ಕವಿತೆಗಾಗಿ ಇಲ್ಲೊಮ್ಮೆ ಕ್ಲಿಕ್ಕಿಸಿರಿ… 

ಕೆ.ಎನ್.ಪಿ.ಯ ಸಮಸ್ತ ಓದುಗ ಬಳಗಕ್ಕೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು..

ಕನ್ನಡ ಉಳಿಸಿ – ಕನ್ನಡ ಬೆಳಸಿ, ಕನ್ನಡವನೆ ಬಳಸಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.