ಕೆ.ಎನ್.ಪಿ.ಕವಿತೆ;

ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಮಂಜುನಾಥ ಮೆಣಸಿನಕಾಯಿ ರವರ “ನಲಿವಿನಿಂದಲೇ ಹೇಳುತ್ತೇನೆ” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ನಲಿವಿನಿಂದಲೇ ಹೇಳುತ್ತೇನೆ

ಮನಸ್ಸಿನ ಮಾತುಗಳು ಮನಸ್ಸಲ್ಲೇ
ಉಳಿದರೇ ಮುತ್ತುಗಳಾಗಲ್ಲ,
ಎಲ್ಲೋ ಕೇಳಿದ ಕಥೆ,ಅನುಭವಿಸಿದ ಕಷ್ಟ,
ನೋಡಿದ ಸಿನೆಮಾಗಳ ಬಗ್ಗೆ ನಿಮ್ಮ
ಜೊತೆ ಹಂಚಿಕೊಳ್ಳುತ್ತೇನೆ,
ಮನಸ್ಸಿಗೆ ತೋಚಿದ್ದನ್ನ,
ಮನಸ್ಸು ನೋಡಿದ್ದನ್ನ ಬರೆಯುತ್ತೇನೆ,
ನೋವನ್ನ ನಲಿವಿನಿಂದಲೇ ಹೇಳುತ್ತೇನೆ.

ಯಾರನ್ನಾದರೂ ಪ್ರೀತಿಸುತ್ತೇನೆ ಅನ್ನುವ ಬದಲು,
ಇಷ್ಟ ಪಡುತ್ತಿದ್ದೇನೆ ಅನ್ನುವುದು ಸೂಕ್ತ,
ಯಾಕೆ ಅಂದ್ರೆ ಪ್ರೀತಿ ನೋಡಿದಾಕ್ಷಣ ಹುಟ್ಟುವುದಿಲ್ಲ
ಎಲ್ಲ ರೀತಿಯಿಂದಲೂ ಅರ್ಥ ಮಾಡಿಕೊಂಡಮೇಲೆ ಪ್ರೀತಿ ಹುಟ್ಟುತ್ತದೆ.

ನೀನಿಲ್ಲದೇ ಆ ತೀರ ಮೌನವಾಗಿತ್ತು,
ಈ ಬದುಕು ಕಳೆಯಲು ಅಷ್ಟೇ ಸಾಕೆನಿಸಿತು,
ಮತ್ತೆ ಯಾಕೋ ನೀ ನೆನಪಾಗಲು,
ಮರೆತು ಹೋದ ಕನಸುಗಳು ಮತ್ತೆ ಬಂದು ಅಣಕಿಸಿದಂತಾಯಿತು,
ಬತ್ತಿ ಹೋದ ಕಣ್ಣ ಗುಡ್ಡೆಗಳಲ್ಲಿ ಮತ್ತೆ ನೀರಿನ ಅಂಶ ಹುಟ್ಟಿದಂತಾಯಿತು.

ಮನಸ್ಸಲ್ಲಿ ಕಟ್ಟಿದ್ದ ಕನಸಿಗೆ ಕೈ ಬೀಸಿ ಕರೆದಂತಾಯಿತು,
ಅರ್ಧಕ್ಕೆ ನಿಲ್ಲಿಸಿದ್ದ ಕವನವೀಗ ಮತ್ತೆ ಸೆಳೆದಂತಾಯಿತು,
ಒಡೆದು ಚೂರಾದ ಹೃದಯಕ್ಕೆಮತ್ತೆ
ಕೋಲಿನಿಂದ ತಿವಿದಂತಾಯಿತು,
ಬಯಕೆಗಳೇ ಇಲ್ಲದ ಜೀವಕ್ಕೆ ಮತ್ತೆ
ಸಾವಿನ ಆಸೆ ಮೂಡಿಸಿದಂತಾಯಿತು.

ಕವಿತೆ | ನಲಿವಿನಿಂದಲೇ ಹೇಳುತ್ತೇನೆ | ಮಂಜುನಾಥ ಮೆಣಸಿನಕಾಯಿ
✍🏻.ಮಂಜುನಾಥ ಮೆಣಸಿನಕಾಯಿ
ಯಲಿವಾಳ
9019213507

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.