ಕೆ.ಎನ್.ಪಿ.ಕವಿತೆ;
ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಮೌನೇಶ್ ನವಲಹಳ್ಳಿ ರವರ “ಮುಸ್ಸಂಜೆಯಲಿ ಉಷೆಯ ಜೊತೆ” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…
ಮುಸ್ಸಂಜೆಯಲಿ ಉಷೆಯ ಜೊತೆ
ಜೀವಕಲ್ಲಲಿ ಒಲವ ತೇದೆವು
ಅರಳಿ ನಿಂತಿದೆ ಬಾಡದ ಹೂವು
ಬಾಗಿಲ ಬಡಿದು ಭಾಗ್ಯ ಬಂದಿದೆ
ಇನ್ನೆಲ್ಲಿದೆ ನೋವು
ಮುಳುಗುವ ರವಿಯು
ಗಗನದಿ ಬರೆದನು ಹೊನ್ನ ಚಿತ್ತಾರ
ಬೆಳಗುವ ಉಷೆಯೂ ಬೆರಳ ಹಿಡಿದಳು
ಇನ್ನೆಲ್ಲಿದೆ ಬೇಸರ
ನನ್ನ ದಣಿದ ದಾರಿಗೆ
ಅವಳೇ ಎಳೆನೀರ ಬಿಂದಿಗೆ
ನನ್ನಲ್ಲಿರುವ ಕತೆಗಳಿಗೆ
ಅವಳೇ ಕೇಳುಗಳು ಮೊದಲಿಗೆ
ಕವಿದ ಮೋಡವ ಸರಿಸಿ
ಬೆಳಕ ಹರಿಸುವವಳು
ಓಡೋ ಮೋಡವ ನಿಲ್ಲಿಸಿ
ಮಳೆ ಸುರಿಸುವವಳು
ಅವಳು ಮತ್ತಾರಲ್ಲಾ ಥೇಟು ನನ್ನಮ್ಮನಂತವಳು
ಬರೀ ಮಗಳಲ್ಲಾ ಮಾನವರ ಮನುಷ್ಯತ್ವ
ಮುಳುಗಿ ಹೋಗಲಿ ಹೀಗಲೇ ಹೆಣ್ಣು ಕೀಳೆಂಬ ತತ್ವ.
-ಮೌನೇಶ್ ನವಲಹಳ್ಳಿ
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.