ಕೆ.ಎನ್.ಪಿ.ಕವಿತೆ;

ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ದೇವರಾಜ್ ನಿಸರ್ಗತನಯ ರವರ “ಮುಂಗಾರು ಸಂಭ್ರಮ…!!” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಮುಂಗಾರು ಸಂಭ್ರಮ…!!

ಹೊತ್ತಾರೆ ನಾನೆದ್ದು
ಹೊಲ್ದಾಕ ಹೋಗ್ತೀನಿ
ಬುತ್ತೀಯ ಹೊತ್ಕೊಂಡು ನೀ ಬಾರಮ್ಮಿ !
ಮಳೆರಾಯ ಬಂದವ್ನೆ
ಮುಂಗಾರು ಸುರಿಸವ್ನೆ
ಹದವಾಗಿ ಉಳುಮೆಯ ಮಾಡ್ತೀನಮ್ಮಿ !!

ಜೋಡೆತ್ತು ಹೊಡ್ಕೊಂಡು
ಬಾರ್ಗೋಲು ಹಿಡಕೊಂಡು
ನೇಗಿಲ ಕಟ್ಕೊಂಡು ಹೋಗ್ತೀನಮ್ಮಿ !
ಕಸಕಡ್ಡಿ ಹೊರಹಾಕಿ
ಹೊಲವೆಲ್ಲ ಹಸನಾಗಿ
ಬಿತ್ತೋಕೆ ಸಿದ್ಧತೆ ಮಾಡೋಣಮ್ಮಿ !

ಬಿತ್ತಿದಾ ಬೀಜವು
ಮೈ ಕೊಡವಿ ಮೊಳೆತಾಗ
ಮೈ ಮುರಿದು ದುಡಿದಿದ್ದು ಲೇಸಾಯ್ತಮ್ಮಿ !
ಪೈರೆಲ್ಲ ಫಸಲಾಗಿ
ಕೊಯ್ಲಿಗೆ ಬಂದಾಗ
ಸಂಕ್ರಾಂತಿ ಸಂಭ್ರಮ ನಮಗಾಯ್ತಮ್ಮಿ !

ಹರಿಸೀದ ಬೆವರೀಗೆ
ಬೆಲೆಯೊಂದು ಸಿಕ್ಕಾರೆ
ಅದಕಿಂಥ ಬೇರೇನು ಬೇಕಿಲ್ಲಮ್ಮಿ !
ಲೋಕದ ಜನಕೆಲ್ಲ
ಅನ್ನವ ಬೆಳೆಯೋಣ
ಕಾಯಕವೆ ಕೈಲಾಸ ಎನ್ನೋಣಮ್ಮಿ !!

ಸುಗ್ಗೀಯು ಬಂದಾಯ್ತು
ಹಿಗ್ಗನ್ನು ತಂದಾಯ್ತು
ಸಂಕ್ರಾಂತಿ ಮಾಡೋಣ ನೀ ಬಾರಮ್ಮಿ !
ರೈತಾನ ಬದುಕೆಂದು
ಹಸನಾಗೆ ಇರಲೆಂದು
ಭೂಮ್ತಾಯ್ಗೆ ನಾವ್ ಕೈಯ ಮುಗಿಯೋಣಮ್ಮಿ !!

ಕವಿತೆ | ಮುಂಗಾರು ಸಂಭ್ರಮ...!!| ದೇವರಾಜ್ ನಿಸರ್ಗತನಯ

✍🏻ದೇವರಾಜ್ ನಿಸರ್ಗತನಯ
ಬಂಗಾರಪೇಟೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.