ಕೆ.ಎನ್.ಪಿ,ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಬಸವರಾಜ ಕಾಸೆರವರ “ಮೂಕವಿಸ್ಮಿತ ಆಲಾಪನೆ” ಕವಿತೆಯನ್ನು ಪ್ರಕಟಿಸಲಾಗಿದೆ…ಸಹೃದಯರು ಕವಿತೆ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಮೂಕವಿಸ್ಮಿತ ಆಲಾಪನೆ

ಹೊಂಬೆಳಕು ಹೊತ್ತ
ಅವಳ ಗುಲಾಬಿ ನಯನಗಳು|
ಕಂಡ ಕೂಡಲೇ ಹೊಳೆಹೊಳೆದು
ಆ ಸಂಜೆಯಾಗಿತ್ತು ಮರುಳು||
ಓದಿ ಮಾಡುತ್ತಿಹನು ಮನನ
ಕೇವಲ ಅಂದದ ಸೊಬಗು|
ತಂಗಾಳಿ ತಣ್ಡಗೆ ಆವರಿಸಿ
ಮುದಗೊಂಡಿದೆ ಮೆಲ್ಲಗೆ ಮೆರುಗು||

ಅದು ಯಾಕೋ ಏನೋ
ಕಳೆದುಕೊಂಡೆ ಆಗ ನನ್ನೇ ನಾನು|
ಎಲ್ಲಿ ಹೇಗೆ ಎಂದು ಹುಡುಕದೆ
ಹೋಗಿ ಕೇಳಿ ಅವಳನ್ನು||

ತುಸು ನಾಚಿಕೆ ಬೆರೆಸಿ
ಮುಂಗಾರು ಮಿಂಚಿನ ಸೆಳೆವು|
ಇಂಚಿಂಚು ಅತಿಕ್ರಮಣ
ಸ್ಥಳವಕಾಶ ಮಾಡಿತು ಒಲವು||
ಬೇಡ ಬೇಡವೆಂದರೂ
ಕೇಳದಂತೆ ಭಾಸ|
ಮಿಡಿಮಿಡಿದು ಆಗಿಹೋಯಿತು
ಈ ಮನ ಪರವಶ||

ಅತಿ ವಿಶೇಷ ಎನಿಸಿ
ಸಹಜ ಸ್ವಭಾವ|
ಅದು ಯಾಕೋ ಏನೋ
ಬದಲಾಗಿ ಹಾವಭಾವ||

ಹೇಗಾದರೂ ಇಡಲಿ
ನಾನೆಷ್ಟು ಗಮನ|
ಆಡಿದಂತೆ ತೂಗುಯ್ಯಲೆ
ಕಣ್ಣಾಮುಚ್ಚಾಲೆಯ ಕ್ಷಣ||
ಅದೆಂತಹ ಕಚಗುಳಿ
ಬೀರುವಾಗ ಕಳ್ಳ ನೋಟ|
ಕಂಡು ಹಿಡಿದಳು ನೋಡಿ
ನನ್ನ ಪಠ್ಯೇತರ ಆಟ ಪಾಠ||

ಬೆಸೆದಾಗ ಕಣ್ಣು ಕಣ್ಣು
ಪ್ರೇಮಮೂರ್ತಿಯ ಪ್ರತಿಷ್ಠಾಪನೆ|
ಇನ್ನೂ ಏನು ಎಂದು ಹೇಳಲಿ
ಮೂಕವಿಸ್ಮಿತ ಆಲಾಪನೆ||

-ಬಸವರಾಜ ಕಾಸೆ
ಮು| ಪೋ| ದೇವಾಪೂರ
ತಾ| ಜಿ| ವಿಜಯಪುರ
ಪಿನ್ ಕೋಡ್ 586125
ಮೊಬೈಲ್ ಸಂಖ್ಯೆ 7829141150
ಮಿಂಚಂಚೆ pradeepbasu40@gmail.com

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.