ಕೆ.ಎನ್.ಪಿ.ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಕವಿ ದೇವರಾಜ್ ನಿಸರ್ಗತನಯ ಅವರ “ಕರುಣೆ ತೋರು ವರುಣ !! ” ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಕರುಣೆ ತೋರು ವರುಣ !!

ಶಾಂತನಾಗೋ ವರುಣ !
ದಯಮಾಡಿ ತೋರು ಕರುಣ !!

ಏನೀ ಅಟ್ಟಹಾಸ ನಿನಗಿದು ತರವೆ ?
ಜಲಾಸುರನೊಡಗೂಡಿ
ಅಬ್ಬರಿಸಿ ಬೊಬ್ಬಿರಿದು ಜೀವಜಂತು
ಮಾರಣ ಹೋಮ ಸರಿಯೆ ?

ಊರು, ಕೇರಿ, ರಸ್ತೆ, ಸೇತುವೆ
ಮನೆ, ಮಠವೆಲ್ಲ ಜಲಾವೃತ !
ಎಲ್ಲೆಲ್ಲೂ ನಿನ್ನದೇ ರೌದ್ರ ನರ್ತನ
ಮಡುಗಟ್ಟಿದೆ ಮತ್ತದೆ ಸಾವಿನ ಸೂತಕ !!

ಜಲಕಂಟಕನ ಜಲಪ್ರಳಯಕೆ
ಪತರುಗುಟ್ಟಿದೆ ಧರೆಯೆ !
ಮಿತಿಮೀರಿ ಹರಿವ ಪ್ರವಾಹಕೆ
ಅಸಹಾಯಕರ ಬಲಿಯೆ !!

ಸಾಕು ಮಾಡು ನಿನ್ನೀ ಪ್ರಲಾಪ
ತೋರದಿರು ನಿನ್ನಾ ಪ್ರತಾಪ !
ಕೇಳದೇ ಹಸುಗೂಸುಗಳಾಲಾಪ
ಬಿಡು ಬಿಡು ನೀ ಕಡುಕೋಪ !!

ಶಾಂತನಾಗೋ ವರುಣ
ದಯಮಾಡಿ ತೋರು ಕರುಣ !
ನಿಲ್ಲಿಸು ಜೀವಜಂತುಗಳ ಮರಣ
ಹಿಡಿದು ಬೇಡುವೆವು ನಿನ್ನ ಚರಣ !!

ಕವಿತೆ | ಕರುಣೆ ತೋರು ವರುಣ !! | ದೇವರಾಜ್ ನಿಸರ್ಗತನಯ

ದೇವರಾಜ್ ನಿಸರ್ಗತನಯ
ಬಂಗಾರಪೇಟೆ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.