ಕೆ.ಎನ್.ಪಿ.ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಕವಿ ದೇವರಾಜ್ ನಿಸರ್ಗತನಯ ಅವರ “ಗಣಪ ಎಲ್ಲಿದ್ದೀಯಪ್ಪಾ?” ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಗಣಪ ಎಲ್ಲಿದ್ದೀಯಪ್ಪಾ?

ಡೊಳ್ಳು ಹೊಟ್ಟೆ ಗಣಪ
ಎಲ್ಲಿದ್ದೀಯ ಬಾಪ್ಪ
ಬೀದಿ ಬೀದಿಲಿ ನಿನ್ನ ಹೆಸರಲಿ
ಚಂದಾ ವಸೂಲ್ ನೋಡಪ್ಪಾ !

ತಿಂಗ್ಳಾನ್ಗಟ್ಲೆ ಮೇಕಿಂಗ್
ವಾರಕ್ಮುಂಚೆ ಬುಕ್ಕಿಂಗ್
ಕಲರ್ ಕಲರ್ ಮಿಕ್ಸ್ ಮಾಡಿ
ತರಾವರಿ ಗೆಟಪ್ ನೀಡಿ !

ಜೇಡಿ ಮಣ್ಣು ಹೋಯ್ತು
ಪ್ಲಾಸ್ಟರ್ ಆಫ್ ಪ್ಯಾರೀಸ್ ಬಂತು
ಕೆರೆ ಕುಂಟೆ ಹಳ್ಳದಲ್ ಇರೋ
ನೀರು ಎಕ್ಕುಟ್ಟಿ ಹೋಯ್ತು !

ರೋಡ್ ರೋಡನು ಬ್ಲಾಕು
ಕಿರುಚುತಾವೆ ಮೈಕು
ಪಡ್ಡೆ ಹೈಕ್ಳು ಚಡ್ಡಿ ಹಾಕ್ಕೊಂಡ್
ಕುಣಿದು ಕುಣಿದೂ ಸುಸ್ತು !

ನಿನ್ ಕೂರ್ಸ್ಬಿಟ್ಟು ಹಿಂಗೆ
ಮೂರೇಟ್ ಹೊಡಿತಾ ಹಲ್ಗೆ
ಕುಡ್ಕೊಂಡ್ ಕುಣಿದು ಕುಪ್ಪಳಿಸಿದ್ರೂ
ಸುಮ್ನೆ ಕುಂತ್ರೆ ಹೆಂಗೆ ?

ಎದ್ದು ಬಾರೋ ಗಣಪ
ಬುದ್ಧಿ ಹೇಳು ಬಾಪ್ಪ
ನಿನ್ನ ಹೆಸ್ರಲ್ ನಡೆಯೋ ದಂಧೆಗ್
ಫುಲ್ಸ್ ಸ್ಟಾಫ್ ಇಡ್ಸೋ ಗಣಪ !

ಕವಿತೆ | ಗಣಪ ಎಲ್ಲಿದ್ದೀಯಪ್ಪಾ? | ದೇವರಾಜ್ ನಿಸರ್ಗತನಯ

ದೇವರಾಜ್ ನಿಸರ್ಗತನಯ
ಬಂಗಾರಪೇಟೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.