ಕೆ.ಎನ್.ಪಿ.ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಕವಿ ದೇವರಾಜ್ ನಿಸರ್ಗತನಯ ಅವರ “ದೀವಳಿಗೆ” ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ದೀವಳಿಗೆ

ಅಜ್ಞಾನದ ಕತ್ತಲೆ ಸರಿದು
ಸುಜ್ಞಾನದ ಬೆಳಕು ಹರಿದು
ಸ್ನೇಹ ಸಂಬಂಧದ ಸೇತುವೆ ಹುರಿಗೊಳುವ ಘಳಿಗೆಯಾಗಲೀ
ದೀವಳಿಗೆ..!

ಕಾಮ ಕ್ರೋಧದ ಕೊಳೆ ತೊಳೆದು
ನೀತಿ ನೇಮಗಳ ಬೆಳೆ ಬೆಳೆದು
ಶಾಂತಿ ನೆಮ್ಮದಿ ಫಸಲು ಕೊಯ್ಯುವ
ಘಳಿಗೆಯಾಗಲೀ ದೀವಳಿಗೆ..!

ಜಾತಿ ಮತಗಳ ಗೋಡೆ ಒಡೆದು
ಧರ್ಮಾಂಧತೆಯ ಪೀಡೆ ಸಿಗಿದು
ಭಾವೈಕ್ಯತೆಯ ಬತ್ತಿಯ ಹೊಸೆಯುವ
ಘಳಿಗೆಯಾಗಲೀ ದೀವಳಿಗೆ..!

ಎಡ ಬಲ ಪಂಥದ ಪರದೆ ಹರಿದು
ಸಮಬಲ ಚಿಂತನೆ ತೈಲ ಎರೆದು
ಮಾನವತೆಯ ಮಹತ್ವ ಸಾರುವ
ಘಳಿಗೆಯಾಗಲೀ ದೀವಳಿಗೆ..!

ನಾನು ನನ್ನದು ಸ್ವಾರ್ಥವ ಒಗೆದು
ಧ್ವೇಷಾಸೂಯೆ ಈರ್ಷೆ ತೊರೆದು
ಸರ್ವಜನಾಂಗದ ಶಾಂತಿಯ ಬಯಸುವ
ಘಳಿಗೆಯಾಗಲೀ ದೀವಳಿಗೆ..!

ಕವಿತೆ | ದೀವಳಿಗೆ | ದೇವರಾಜ್ ನಿಸರ್ಗತನಯ

ದೇವರಾಜ್ ನಿಸರ್ಗತನಯ
ಬಂಗಾರಪೇಟೆ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.