ಕೆ.ಎನ್.ಪಿ.ಕವಿತೆ;

ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಏರಂಗೆರೆ ನಟರಾಜ ರವರ “ಚಿಗುರಿದ ಪ್ರೀತಿ” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಚಿಗುರಿದ ಪ್ರೀತಿ

ಹುಟ್ಟಿತೊಂದು ಹೊಸತು‌ ಕವಿತೆ
ನೀನು‌ ಸಿಕ್ಕಿದಾಗಲೆ
ಸೂರ್ಯ ಚಂದ್ರ ಚುಕ್ಕಿ ಬೆಳಕ
ಹೆಕ್ಕಿ ತಂದು‌ ನೀಡಲೆ

ಚಿಗುರು ಪೈರು ಗರಿಯ ಬಿಚ್ಚಿ
ಇಳೆಗೆ ರಂಗು ತಂದಿದೆ
ನಿನ್ನ ಹೆಜ್ಜೆ ಗೆಜ್ಜೆಯೊಡನೆ
ಅದಕೆ ಇಂಬು ನೀಡಿದೆ

ಕಣ್ಣ ಕಾಂತಿ ಹೊಳಪಿನಿಂದ
ಬಾನ ಬಿಲ್ಲು ಮೂಡಿದೆ
ನನ್ನ ನಿನ್ನ ಮಿಲನಕಿಂದು
ರಂಗು ಹಚ್ಚಿ ಕಾದಿದೆ

ನೋಡಬೇಡ ಗೆಳತಿ ಹೀಗೆ
ಹೃದಯಬಡಿತವೇರಿದೆ
ಬರಡಿ ಹೋದ ಪಾಪಿ ಬದುಕು
ಈಗ ತಾನೆ ಚಿಗುರಿದೆ.

ನಿನ್ನ ಉಸಿರ ಬೆರಸಿ ಈಗ
ಬದುಕ ಭರಿಸಬೇಕಿದೆ
ನೀನು ಇರದೆ ನಾನು ಇರೆನು
ಬದುಕು ಭಾರವಾಗಿದೆ

-ಏರಂಗೆರೆ ನಟರಾಜ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.