ಕೆ.ಎನ್.ಪಿ,ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಬಸವರಾಜ ಕಾಸೆರವರ “ಚೆಲುವು ಒಲವು” ಕವಿತೆ ಅನ್ನು ಪ್ರಕಟಿಸಲಾಗಿದೆ…ಸಹೃದಯರು ಕವಿತೆ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಚೆಲುವು ಒಲವು

ನಿನ್ನ ಕಂಡ ಮೇಲೆಯೇ
ಹುಟ್ಟಿತೆ ಸೌಂದರ್ಯ
ನಿನ್ನ ಮೆಚ್ಚಿಸಲೆಂದೆ
ಆಗುವುದೇ ಸೂರ್ಯೋದಯ
ಇಣುಕು ಮಿಣುಕು
ನೀ ಬೆಳಗು ಬೆಳಕು

ಹನಿ ಹನಿ ಸಾಲು
ನಿನ್ನ ತಾಜಾ ತಳಿರುತೋರಣವೇ
ಮಸಕು ಮಸಕು ನಸುಕು
ಮಂಜು ನಿನ್ನ ಗುಣಗಾನವೇ
ಮತ್ತು ಮೆತ್ತು
ನೀ ಅಪರೂಪದ ಸ್ವಾತಿಮುತ್ತು

ಕಣ್ಣಲ್ಲೇ ಮುಗ್ಧತೆಯು
ಚಿಲಿಪಿಲಿ ಹಾಡಿದೆ
ಸಹಾಯ ಪ್ರವೃತ್ತಿ
ನಿನ್ನ ಸ್ವಭಾವವೆಂದಿದೆ
ನಲಿವಾ ನಿಲುವು
ನೀ ಮಗುವ ನಗುವು

ಮೈ ನೆರೆಯಿತು
ಮುಂಚೆಯೇ ಮಲ್ಲಿಗೆ
ಸುತ್ತುವರೆದು ಸ್ವಂತವಾದವು
ನಿನಗೆಂದೇ ಅಲ್ಲಿಗೆ
ಗಣಿಯು ಗಿಣಿಯು
ನೀ ಮಕರಂದದ ಅರಗಿಣಿಯು

ಮಾರುವೇಷದಲ್ಲಿ ಬಂದಾರು
ಮೂರು ಲೋಕದ ಧೀರರು
ತೋರಲಾಗದೆ ತಮ್ಮ ಶೌರ್ಯ
ಮಾರು ಹೋಗಿ ನಿಂತಾರು
ಚೆಲುವು ಒಲವು
ನಿನ್ನದೇ ಗುನುಗುನಿಸುವ ಗಾನವು

ಬಸವರಾಜ ಕಾಸೆ
7829141150
pradeepbasu40@gmail.com

http://karnatakanewsportal.com/kavite-nenapaguve-yake-nanage-basavarajkase/

http://karnatakanewsportal.com/gajal-saddagada-santhe-basavarajkase/

http://karnatakanewsportal.com/kavite-mukavismite-alapane-basavarajkase/

http://karnatakanewsportal.com/kavite-raithana-kanniru-basavarajkase/

http://karnatakanewsportal.com/kavite-ega-ninage-yestu-varsha-basavarajkase/

http://karnatakanewsportal.com/sannakathe-virudda-hejjeya-premalahari-basavarajkaase/

http://karnatakanewsportal.com/kate-mejesticna-hallada-aa-thulasi-park-basavarajkase/

http://karnatakanewsportal.com/lekhana-phalukugallu-mathu-adara-jhalakkugallu-basavarajakase/

http://karnatakanewsportal.com/chutuku-avallakopa-basavarajakase/

http://karnatakanewsportal.com/gajal-yekanthada-aalingana-basavarajkaase/

http://karnatakanewsportal.com/shayarigallu-thavaru-mathu-avallu-basavarajkaase/

http://karnatakanewsportal.com/kavithe-avallaappuge-basavarajkaase/

http://karnatakanewsportal.com/shishugeete-putta-putta-tharale-putta-basavarajakase/

http://karnatakanewsportal.com/gajal-thakadimitha-basavaraj-kase/

http://karnatakanewsportal.com/gajal-hegalige-hegalu-bennige-bennu-basavaraja-kase/

http://karnatakanewsportal.com/kavite-ninna-hejje-agejje-basavarajakase/

http://karnatakanewsportal.com/kavithe-adenthaha-sambrama-basavarajakase/

http://karnatakanewsportal.com/kavite-vayyarada-achu-basavaraja-kase/

http://karnatakanewsportal.com/katte-goobe-endu-kareyuvudara-hinde-gazal-basavarak-kase/

http://karnatakanewsportal.com/gajal-basavaraja-kase-avaru-rachisiruva-kannada-gajalagalu/

http://karnatakanewsportal.com/basavaraj-kaseravara-chutukugallu/

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.