ಕೆ.ಎನ್.ಪಿ.ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಉಪನ್ಯಾಸಕಿ ಹಾಗೂ ಬರಹಗಾರ್ತಿ ಜ್ಯೋತಿ ಬಳ್ಳಾರಿ ಅವರು ರಚಿಸಿದ “ಭತ್ತದ ನಾಡು ಗಂಗಾವತಿ” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಗಂಗಾವತಿ ಎಂದರೆ,
ಬರೀ ಊರಲ್ಲ,
ದೇಶಕ್ಕೆ ಅನ್ನ ನೀಡುವ ನಾಡು,
ನಮ್ಮ ಭತ್ತದ ನಾಡು.

ಗಂಗಾವತಿ ಎಂದರೆ,
ಬರೀ ಹೆಸರಲ್ಲ,
ಜನರ ಉಸಿರಲ್ಲೂ,
ಆರಾಧ್ಯದೈವ ಚನ್ನಬಸವ ತಾತನ ಪೂಜಿಸುವಬೀಡು.

ಗಂಗಾವತಿ ಎಂದರೆ,
ಬರೀ ಪ್ರಾಂತ್ಯವಲ್ಲ,
ಕವಿಗಳ ನಾಡು,
ಬೀಚಿಯವರ ತವರೂರು.

ಗಂಗಾವತಿ ಎಂದರೆ,
ಬರೀ ಸಾಧನೆಯಬೀಡಲ್ಲ,
ಕಣಕಣದಲ್ಲೂ ಸಂಸ್ಕಾರವನ್ನು,
ತೋರುವ ನೆಲವಿದು.

ಗಂಗಾವತಿ ಎಂದರೆ,
ಬರೀ ಇತಿಹಾಸವಲ್ಲ,
ರಾಮಾಯಣಕ್ಕೆ ಸಾಕ್ಷಿಯಾದ,
ಆಂಜಿನೇಯ ಜನಿಸಿದ ನಾಡು.

ಗಂಗಾವತಿ ಎಂದರೆ,
ಬರೀ ಸೌಹಾರ್ದವಲ್ಲ,
ಹಿಂದೂ ಮುಸ್ಲಿಂ ಕ್ರೈಸ್ತರ,
ಸರ್ವಜನಾಂಗದ ಶಾಂತಿಯ ತೋಟವಿದು.

-ಜ್ಯೋತಿ ಬಳ್ಳಾರಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.