ಕೆ.ಎನ್.ಪಿ.ಕವಿತೆ,ಜೂ.29;
ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ ಕವಯತ್ರಿ ಡಾ. ಹಸೀನಾ ಖಾದ್ರಿ ಅವರ ಕವಿತೆ ಪ್ರಕಟಿಸಲಾಗಿದೆ.
ಸಹೃದಯರು ಕವಿತೆ ಓದಿ ತಮ್ಮಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.
ಬೆರಗಿನ ಬಯಲು
ಸಹಜವೇ ನಲ್ಲ
ಎಡವಿ ಬೀಳುವುದು
ಕೈ ಹಿಡಿದು ನಡೆಸುವ
ನಿನ್ನ ಮುಖದಲಿ
ಮೂಡುವುದು ಆಗೀಗ ನೋವು.
ನೋಡಲ್ಲಿ ಬಾನಲ್ಲಿ
ಗುಡುಗು ಮಿಂಚು
ನಿನ್ನೆಡೆಗಿನ ನನ್ನೊಲವ
ಅಲುಗಾಡಿಸುವ ಸಂಚು.
ಇಳಿ ಹೊತ್ತ ಸೂರ್ಯ ನ
ಪ್ರತಿಬಿಂಬ ಮೂಡಿತು
ಕೆನ್ನೆಯಲಿ
ಉಫ್…..
ಕೆನ್ನೆ ರಂಗೇರಿಸಿದ್ದು
ನೀನೇ ಎಂದು ಗೊತ್ತು.
ತೋಟದಲಿ ತಿರುಗಿ
ದುಂಬಿಯಂತೆ
ಹೂಗಳ ಹುಡುಕಿ
ತಂದೆ,
ನಿನ್ನಾಟ ಬಲ್ಲವರಾರು?
ಹೆಣೆದ ಹೂವಿನ ಮಾಲೆಯ
ನಾನೇ ಮುಡಿಯಲೇ?
ಇಲ್ಲ,
ನಿನ್ನ ಸಂತನ ಗೋರಿಗೆ
ಅರ್ಪಿಸಿ ಕೃತಾರ್ಥಳಾಗಲೇ?
ಹೂವೊಂದು ನೆಪ
ನಿನ್ನದೇ ಜಪ ;
ನನ್ನಾತ್ಮದೊಳು ನೀನು
ನಿನ್ನೊಳು ನಾನು
ಇದು ಬಯಲೋ?
ಬೆರಗೋ?
ತಿಳಿಯದ ಮರೆವೋ?
- ಡಾ. ಹಸೀನಾ ಖಾದ್ರಿ
ನಿಮ್ಮ ಕವಿತೆಗಳನ್ನು ಕೂಡ ಕಳುಹಿಸಬಹುದು.
9513326661
ನೀವು ಕೂಡ ಬರೆಯಬಹುದು :
ಆತ್ಮೀಯರೇ ಕೆ.ಎನ್.ಪಿ.ಯಲ್ಲಿ ನೀವು ಕೂಡ ಬರೆಯಬಹುದಾಗಿದೆ. ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆಯಿರಿ, ಕೆ.ಎನ್.ಪಿ.ಗೆ ಕಳುಹಿಸಿರಿ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.
- ಕೆ.ಎನ್.ಪಿ.ಫೇಸ್ಬುಕ್ ಅಕೌಂಟ್ ಗಾಗಿ ಈ ಗುಂಡಿ ಒತ್ತಿರಿ
- ಕೆ.ಎನ್.ಪಿ.ಯುಟ್ಯೂಬ್ ಚಾನಲ್ ಗಾಗಿ ಈ ಗುಂಡಿ ಒತ್ತಿರಿ
- ಕೆ.ಎನ್.ಪಿ.ಆ್ಯಪ್ ಗಾಗಿ ಈ ಗುಂಡಿ ಒತ್ತಿರಿ