ಕೆ.ಎನ್.ಪಿ.ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಡಾ.ರೇಣುಕಾತಾಯಿ.ಎಂ.ಸಂತಬಾ (ರೇಮಾಸಂ) ಅವರ “ಬೇಡಿಕೆ ಭಾಸ್ಕರ” ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಬೇಡಿಕೆ ಭಾಸ್ಕರ.

ಬೇಡಿಕೆ ಬೆಳಕಿನ ಭಾಸ್ಕರ,
ಕಾಣದಾಗಿದೆ ಕರುಣೆಯ ಕಂದಿಲು,
ತಂದೆಯಾ ಹಿಡಿಯಷ್ಟು ಹೊಳಪು,
ಬೇಕಾಗಿದೆ ಬಿರು ಬಿಸಿಲು//

ಚಳಿಯಾಗಿದೆ ನೆನೆದ ಇಳೆಗೆ,
ಬೆಚ್ಚನೆ ಚಾದರ ಹೊಚ್ಚಬಾರದೇ,
ನಡುಗುತಿಹಳು ಗಡಗಡ ನೋಡಬಾರದೇ,
ಆಕಾಶದಿ ಆದಿತ್ಯ ಆಗಮಿಸಬಾರದೇ,//

ಪರ್ವತಗಳು ಪರವಶದಿ,
ರವಿ ಬಿಸಿ ಅಪ್ಪುಗೆ,
ಕಾನನಗಳು ಕಂಗಾಲಾಗಿವೆ,
ಸುಖ ಸೂರ್ಯ ರಶ್ಮಿಗೆ,//

ಬಂದು ಬಿಡು ನುಗ್ಗಿ,
ಕರಿ ಮೋಡಗಳ ಪೊರೆ ಹರಿದು,
ತೋರು ಬೆಳಕಿನ ಝಳಪು,
ಮಿಂಚಿಗಿಂತ ಮುಂದೆ ಪ್ರಕಾಶಿಸು//

ಕವಿತೆ | ಬೇಡಿಕೆ ಭಾಸ್ಕರ | ರೇಮಾಸಂ

-ರೇಮಾಸಂ
ಡಾ.ರೇಣುಕಾತಾಯಿ.ಎಂ.ಸಂತಬಾ
rensan2004@yahoo.com

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.