ಕೆ.ಎನ್.ಪಿ.ಕವಿತೆ;

ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಶ್ರೀನಿವಾಸ ಎಂ ಪಣಕಹಳ್ಳಿ ರವರ “ಅನ್ನದಾತ ರೈತ” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಅನ್ನದಾತ ರೈತ

ಭೂಮಾತೆಯ ಮಗನು
ಸೂರ್ಯವಂಶದ ಕುಲದವನು
ಚಂದ್ರಕಾಂತಿಯ ವದನನು
ಜಗದ ಹಸಿವ ನೀಗಿಸುವ
ಸೀಮಾಪುರುಷರೈತ ಅನ್ನದಾತನು

ನಿನಗೆ ಬೇಕಿಲ್ಲ
ಯಾರ ಹಂಗು, ಶಿಫಾರಸು,
ನಿನ್ನ ಬೆವರ ಹನಿಯೆ
ನಿನಗೆ ಸರಿಸಾಟಿ,
ಸುಡುಸುಡು ಬಿಸಿಲಲಿ
ಮಣ್ಣಸೀಳುತ,
ಬಾರಕೋಲ ಚಾಟಿಗೆ
ಅಂಜುತ,ಓಡುತ,ಓಡೋಡುತ
ನಡೆದಾಡುತ, ಮುಂದೆ ಸಾಗಿವೆ!!

ಪರಿಶ್ರಮ ನಿನ್ನದು,
ಬೆಳೆದ ಫಲಕೆ ಬೆಲೆಯಿಲ್ಲ!
ಸಂತೇಲಿ ಎಲ್ಲವು ಚೆಲ್ಲಾಪಿಲ್ಲಿ? ಎಲ್ಲರ
ಹೊಟ್ಟೆ ತುಂಬಿಸಿದೆ!!
ನಿನಗೂ, ನಿನ್ನವರಿಗೂ
ಹಸಿವಿನ ಚೀಲ, ಸಾಲದ ಶೂಲ!!

ಹೆತ್ತಕಂದಮ್ಮಗಳ
ಬಯಕೆಯ ಈಡೇರಿಸದ ನಿಸ್ಸಾಹಾಯಕ!
ಕಣ್ಮುಚ್ಚಿದರೆ ಮಗನ ಭವಿಷ್ಯ,
ಕಣ್ತೆರೆದರೆ ಮಗಳ ಜೀವನದ ಕೊರಗು
ನ್ಯಾಯ ಸಿಗುವುದೆಲ್ಲಿ?
ಅರಿದ ಅಂಗಿಯಲ್ಲ! ಬಿರಿದ ನೆಲದಲ್ಲ!
ಕೊಚ್ಚಿ ಹೋದ ಮಳೆಯಲ್ಲ!
ಒಣ ಭೂಮಿಯಲ್ಲ!
ಬಂಜರು ಭೂಮಿಯಲ್ಲ!
ರಣರಣಗುಟ್ಟುವ, ಸೃಷ್ಠಿಯಲ್ಲ!
ಸುಡುಸುಡು ಬಿಸಿಲಿನಲ್ಲ!
ಯಾರು ಕೊಡುವರು ನ್ಯಾಯ!
ಮಾತನಾಡದ ಮೂಕ ಜೀವಿಗಳೆ ಹೇಳಿರಿ
ನ್ಯಾಯ ಸಿಗುವುದೆಲ್ಲಿ?

ಶ್ರೀನಿವಾಸ ಎಂ ಪಣಕಹಳ್ಳಿ

– ಶ್ರೀನಿವಾಸ.ಎಂ ಪಣಕಹಳ್ಳಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.