ಕೆ.ಎನ್.ಪಿ.ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಹಿರಿಯ ಕವಿ ಎ.ಎಸ್.ಮಕಾನದಾರ ಅವರ “ಆ ಕಾಲಕ್ಕೆ ಕಾಯುವೆ ” ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಆ ಕಾಲಕ್ಕೆ ಕಾಯುವೆ

ಮಸೀದೆಯ ಅಜಾನ್
ಚರ್ಚ್ ನಲ್ಲಿ ಕೇಳಬೇಕು

ಚರ್ಚ್ ನಲ್ಲಿಯ ಪ್ರಾರ್ಥನೆ
ಮಂದಿರ ದಲ್ಲಿ ಜರುಗಬೇಕು

ಮಂದಿರ ದಲ್ಲಿ ಸೇರಿದ ಜನ
ಸಾಮೂಹಿಕ ಪ್ರಾರ್ಥನೆ ಸಲ್ಲಿಸಬೇಕು

ನನ್ನ ಕಾಯ
ಕರ್ಪುರ ವಾಗಬೇಕು

ಮಂದಿರ ಮಸೀದೆ
ಚರ್ಚ್ ನಲ್ಲಿ ಬೆಳಗಬೇಕು

ನರನಾಡಿಗಳು
ನೀಲಾಂಜನಕೆ ಬತ್ತಿ ಯಾಗಬೇಕು

ರಕುತ ಎಣ್ಣಿಯಾಗಬೇಕು
ಮನಸು ಬೆಣ್ಣಿಯಂತೆ ಕರಗಬೇಕು

ಆ ಕಾಲಕ್ಕಾಗಿ ನನ್ನ
ಕಣ್ಣುಗಳು ಕಾಯಬೇಕು

ಆ ಕಾಲಕ್ಕೆ ಕಾಯುವೆ

ಎ.ಎಸ್. ಮಕಾನದಾರ ಗದಗ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.