ಕೆ.ಎನ್.ಪಿ.ಕವಿತೆ;

ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಮಂಜುನಾಥ ಮೆಣಸಿನಕಾಯಿ ರವರ “ಆ ದೇವರ ಸೃಷ್ಟಿ” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಆ ದೇವರ ಸೃಷ್ಟಿ

ನಮ್ಮನ್ನು ಸೃಷ್ಟಿ ಮಾಡಿದ
ಆ ದೇವರು
ನಮ್ಮ ಜೀವನದಲ್ಲಿ ಎಲ್ಲವೂ ಇದ್ದರು ಕೂಡಾ
ಅದು ಬರಿ ಒಂದು ಶೂನ್ಯವಾಗಿದೆ.

ಆ ದೇವರ ಸೃಷ್ಟಿ

ಸೃಷ್ಟಿಕರ್ತ ದೇವ
ಸೃಷ್ಟಿಸಿದ್ದೇನೂ ಇಲ್ಲ
ಸೃಷ್ಟಿಸಿದ್ದೆಲ್ಲ ಬರೀ ಶೂನ್ಯ
ಸೃಷ್ಟಿಸಿದನು ಭೂಮಿಯ
ಅದರಾಕಾರವೊಂದು ಶೂನ್ಯ
ಆಗಸವೂ ಶೂನ್ಯ
ಸೂರ್ಯ ಚಂದ್ರರೂ ಶೂನ್ಯ
ಕಾಲಚಕ್ರವೂ ಶೂನ್ಯ.

ಆ ದೇವರ ಸೃಷ್ಟಿ

ನೀನೆಂಬುದು ಏನಿಲ್ಲ
ನಾನೆಂಬುದು ಏನೇನೂ ಇಲ್ಲ
ನಾನು ನೀನು ಇರದೆ
ಬದುಕೆಂಬುದೊಂದು ಶೂನ್ಯ
ಒಂದಕ್ಕೊಂದು ಕೂಡಿದ
ಕೂಡಿದ್ದನ್ನು ಕಳೆದ
ಗುಣಿಸಿ ಭಾಗಿಸಿ ಕೊನೆಗವನು ಉಳಿಸಿದ್ದು ಬರೀ ಶೂನ್ಯ.

ಆ ದೇವರ ಸೃಷ್ಟಿ

ಜನಿಸುವಾಗ ಏನೂ ತಂದಿಲ್ಲ
ಸತ್ತಾಗ ಕೊಂಡುಯ್ಯುವುದು ಏನಿಲ್ಲ
ಪಡೆದದ್ದೂ ಏನೂ ಇಲ್ಲ
ಕೊಟ್ಟಿದ್ದು ಏನಿಲ್ಲ
ಎಲ್ಲ ಇದ್ದೂ ಏನೂ
ಏನಿಲ್ಲದ ಈ
ಜಗತ್ತಿನಲಿ ಶೂನ್ಯ
ಜೀವನವೊಂದು ಬರೀ ಶೂನ್ಯ.

ಕವಿತೆ | ಆ ದೇವರ ಸೃಷ್ಟಿ | ಮಂಜುನಾಥ ಮೆಣಸಿನಕಾಯಿ

✍️. ಮಂಜುನಾಥ ಮೆಣಸಿನಕಾಯಿ
ಯಲಿವಾಳ
ಹುಬ್ಬಳ್ಳಿ
ಮೊ ಸಂಖ್ಯೆ.
9019213507

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.