ಕೆ.ಎನ್.ಪಿ.ಕವಿತೆ,ಅ.19;

ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ ಕವಿ ಬಸವರಾಜ ಕಾಸೆ ಅವರ ಗಜಲ್ ಪ್ರಕಟಿಸಲಾಗಿದೆ. 

ಸಹೃದಯರು ಗಜಲ್ ಓದಿ ತಮ್ಮಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ. 

ಗಜಲ್ | ಕತ್ತೆ ಗೂಬೆ ಎಂದು ಕರೆಯುವುದರ ಹಿಂದೆ

ಕೋತಿ ಗೂಬೆ ಎಂದು ಕರೆಯುವುದರಲ್ಲಿ ಯಾವ ಸಂತಸ ಅಡಗಿದಿಯೋ ನಾನರಿಯೆ/
ನನಗಂತೂ ಇಷ್ಟವಾಗುವುದು ಅದರಲ್ಲಿ ಅಂತಹದ್ದು ಏನಿದೆಯೋ ನಾನರಿಯೆ//

ತುಂಬು ಪ್ರೀತಿಯ ಒಲವಿನ ಕೂಗಿಗೆ ಬಗೆಬಗೆಯ ಎಷ್ಟೊಂದು ಪೆದ್ದು ಹೆಸರುಗಳು/
ಮುದ್ದಾಗಿ ರಮಿಸುವ ಪರಿಯ ನಾಜೂಕು ತಂದಿದ್ದು ಮುನಿಸಿಗೆ ನಾಚಿಕೆಯೋ ನಾನರಿಯೇ//

ಜೋಡಿಗಳ ಏಕಾಂತದ ಪಿಸುಮಾತು ಕದ್ದು ಆಲಿಸಿ ಬರಬೇಕೇನೋ ಸಾವಿರ ಸಾರಿ/
ಜಾಲಾಡಿದಷ್ಟು ಮರ್ಕಟ ಉತ್ತರ ಸಿಗದ ನಗುವ ಪ್ರಶ್ನೆಗಳು ಎಷ್ಟಿದೆಯೋ ನಾನರಿಯೆ//

ಅದರದೇ ಆದ ಆದರದ ಸ್ವಾದ ಕಬ್ಬಲ್ಲಿರುವ ಸಕ್ಕರೆಯಂತೆ ಅಕ್ಕರೆಯ ರೀತಿ/
ವ್ಯಕ್ತಪಡಿಸುವ ಚೆಲುವು ಅರ್ಥೈಸಿಕೊಳ್ಳುವುದರಲ್ಲಿ ಏನಾದರೂ ಇದೀಯೋ ನಾನರಿಯೆ//

ಆತ್ಮೀಯ ಸಲುಗೆ ನಿಕಟ ಬಂಧ ತೋರುವ ತರಹ ಹಲವು ವಿಧಗಳ ಉಕ್ಕುವ ಚಿಲುಮೆ/
ಮಾಡಿದಷ್ಟು ಮಧುರ ವಿಚಿತ್ರ ನಾಮಕರಣ ಹಿತ ಕಾಳಜಿ ಹಿಂದಿದಿಯೋ ನಾನರಿಯೆ//

ನಯವಾದ ಬೈಗುಳಗಳ ಲಹರಿ ಬಸುಗೆ ಬೆರಗಿನ ರೋಮಾಂಚನ ನೆನೆದು/
ಲೇ ಕತ್ತೆ ನಿಜ ಹೆಸರೇ ಮರೆಸುವ ಸೊಗಸು ನುಡಿ ನಿನ್ನಲ್ಲಿದಿಯೋ ನಾನರಿಯೆ//

ಬಸವರಾಜ ಕಾಸೆ
ಮು/ ಪೋ/ ದೇವಾಪೂರ
ತಾ/ ಜಿ/ ವಿಜಯಪುರ
ಪಿನ್ ಕೋಡ್ 586125
ಸಂಪರ್ಕ ಸಂಖ್ಯೆ 7829141150

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.