ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.19;

ಡಿಸೆಂಬರ್ 5 ರಂದು ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಯಲ್ಲಿ ಸ್ಪರ್ಧಿಸಲು ಯಾರಿಗೆ ಟಿಕೆಟ್ ಸಿಕ್ಕಿದೆ, ಯಾರು ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲಗಳಿಗೆ ಉತ್ತರ ಇಲ್ಲಿದೆ ನೋಡಿ… 

ಗೋಕಾಕ್, ಕಾಗವಾಡ, ಅಥಣಿ, ಹಿರೇಕೆರೂರು, ರಾಣೆಬೆನ್ನೂರು, ಯಲ್ಲಾಪುರ, ವಿಜಯನಗರ, ಚಿಕ್ಕಬಳ್ಳಾಪುರ, ಹೊಸಕೋಟೆ, ಕೆಆರ್ ಪುರ, ಶಿವಾಜಿನಗರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಹುಣಸೂರು ಮತ್ತು ಕೆಆರ್ ಪೇಟೆ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಸೋಮವಾರ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಸೇರಿದಂತೆ ಅನೇಕರು ನಾಮಪತ್ರ ಸಲ್ಲಿಸಿದರು.

ನಾಮಪತ್ರಗಳ ಪರಿಶೀಲನೆ ಮಂಗಳವಾರ ನಡೆಯಲಿದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ನ.21 ಕೊನೆಯ ದಿನವಾಗಿದೆ. ಎಷ್ಟು ಮಂದಿ ನಾಮಪತ್ರ ಸಲ್ಲಿಸಿದ್ದಾರೆ, ಯಾರ ನಾಮಪತ್ರ ತಿರಸ್ಕೃತವಾಗಲಿದೆ, ಯಾರು ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದುಕೊಳ್ಳಲಿದ್ದಾರೆ ಎಂಬ ಕುತೂಹಲಗಳಿಗೆ ಇನ್ನೆರಡು ದಿನಗಳಲ್ಲಿ ಉತ್ತರ ಸಿಗಲಿದೆ. 

ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ…

ಯಶವಂತಪುರ ಕ್ಷೇತ್ರ

 • ಎಸ್‌ಟಿ ಸೋಮಶೇಖರ್ (ಬಿಜೆಪಿ)
 • ಪಿ. ನಾಗರಾಜ್ (ಕಾಂಗ್ರೆಸ್)
 • ಜವರಾಯಿಗೌಡ (ಜೆಡಿಎಸ್)

ಕೆಆರ್ ಪುರ

 • ಬೈರತಿ ಬಸವರಾಜ್ (ಬಿಜೆಪಿ)
 • ನಾರಾಯಣಸ್ವಾಮಿ (ಕಾಂಗ್ರೆಸ್)
 • ಕೃಷ್ಣಮೂರ್ತಿ (ಜೆಡಿಎಸ್)

ಮಹಾಲಕ್ಷ್ಮಿ ಲೇಔಟ್

 • ಕೆ. ಗೋಪಾಲಯ್ಯ (ಬಿಜೆಪಿ)
 • ಎಂ. ಶಿವರಾಮು (ಕಾಂಗ್ರೆಸ್)
 • ಡಾ. ಗಿರೀಶ್ ನಾಶಿ (ಜೆಡಿಎಸ್)

ಶಿವಾಜಿನಗರ

 • ಶರವಣ (ಬಿಜೆಪಿ)
 • ರಿಜ್ವಾನ್ ಅರ್ಷದ್ (ಕಾಂಗ್ರೆಸ್)
 • ತನ್ವೀರ್ ಅಹ್ಮದ್ (ಜೆಡಿಎಸ್)

ಚಿಕ್ಕಬಳ್ಳಾಪುರ

 • ಕೆ. ಸುಧಾಕರ್ (ಬಿಜೆಪಿ)
 • ಆಂಜಿನಪ್ಪ (ಕಾಂಗ್ರೆಸ್)
 • ಕೆಪಿ ಬಚ್ಚೇಗೌಡ
 • ರಾಧಾಕೃಷ್ಣ (ಜೆಡಿಎಸ್) 

ಹೊಸಕೋಟೆ

 • ಎಂಟಿಬಿ ನಾಗರಾಜ್ (ಬಿಜೆಪಿ)
 • ಪದ್ಮಾವತಿ ಸುರೇಶ್ (ಕಾಂಗ್ರೆಸ್)
 • ಶರತ್ ಬಚ್ಚೇಗೌಡ (ಪಕ್ಷೇತರ)

ಹುಣಸೂರು

 • ಎಚ್ ವಿಶ್ವನಾಥ್ (ಬಿಜೆಪಿ)
 • ಎಚ್ ಪಿ ಮಂಜುನಾಥ್ (ಕಾಂಗ್ರೆಸ್)
 • ಸೋಮಶೇಖರ್ (ಜೆಡಿಎಸ್)

ಕೆಆರ್ ಪೇಟೆ

 • ನಾರಾಯಣಗೌಡ (ಬಿಜೆಪಿ)
 • ಕೆಬಿ ಚಂದ್ರಶೇಖರ್ (ಕಾಂಗ್ರೆಸ್)
 • ದೇವರಾಜ್ ಬಿಎಲ್ (ಜೆಡಿಎಸ್)

ಗೋಕಾಕ್

 • ರಮೇಶ್ ಜಾರಕಿಹೊಳಿ (ಬಿಜೆಪಿ)
 • ಲಖನ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ (ಕಾಂಗ್ರೆಸ್)
 • ಅಶೋಕ್ ಪೂಜಾರಿ (ಜೆಡಿಎಸ್) 

ಅಥಣಿ

 • ಮಹೇಶ್ ಕುಮಟಳ್ಳಿ (ಬಿಜೆಪಿ)
 • ಗಜಾನನ ಮಂಗಸೂಳಿ (ಕಾಂಗ್ರೆಸ್)
 • ಗುರು ದಾಶ್ಯಾಳ (ಜೆಡಿಎಸ್) 

ಕಾಗವಾಡ

 • ಶ್ರೀಮಂತ್ ಪಾಟೀಲ್ (ಬಿಜೆಪಿ)
 • ರಾಜು ಕಾಗೆ (ಕಾಂಗ್ರೆಸ್)
 • ಶ್ರೀಶೈಲ್ ತುಗಶೆಟ್ಟಿ (ಜೆಡಿಎಸ್)

ರಾಣೆಬೆನ್ನೂರು

 • ಅರುಣ್ ಕುಮಾರ್ ಪೂಜಾರಿ (ಬಿಜೆಪಿ)
 • ಕೆಬಿ ಕೋಳಿವಾಡ (ಕಾಂಗ್ರೆಸ್)
 • ಮಲ್ಲಿಕಾರ್ಜುನ ಹಲಗೇರಿ (ಜೆಡಿಎಸ್) 

ಹಿರೇಕೆರೂರು

 • ಬಿ.ಸಿ ಪಾಟೀಲ್ (ಬಿಜೆಪಿ)
 • ಬಿಎಚ್ ಬನ್ನಿಕೋಡ್ (ಕಾಂಗ್ರೆಸ್)
 • ಶಿವಾನಂದ ಶಿವಾಚಾರ್ಯ ಸ್ವಾಮೀಜಿ (ಜೆಡಿಎಸ್)

ವಿಜಯನಗರ

 • ಆನಂದ್ ಸಿಂಗ್ (ಬಿಜೆಪಿ)
 • ಬಿವೈ ಘೋರ್ಪಡೆ (ಕಾಂಗ್ರೆಸ್)
 • ಎನ್ ಎಂ ನಬಿ (ಜೆಡಿಎಸ್)
 • ಕವಿರಾಜ್ ಅರಸು (ಬಿಜೆಪಿ ಬಂಡಾಯ)

ಯಲ್ಲಾಪುರ

 • ಶಿವರಾಂ ಹೆಬ್ಬಾರ್ (ಬಿಜೆಪಿ)
 • ಭೀಮಣ್ಣ ನಾಯ್ಕ್ (ಕಾಂಗ್ರೆಸ್)
 • ಚೈತ್ರಾ ಗೌಡ (ಜೆಡಿಎಸ್)

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.