ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಡಿ.06;

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಅಂತ್ಯಗೊಂಡಿದ್ದು ಒಟ್ಟು 66.25 ರಷ್ಟು ಮತದಾನ ದಾಖಲಾಗಿದೆ. ಅಥಣಿಯಲ್ಲಿ ಅತಿಹೆಚ್ಚು ಮತದಾನ ನಡೆದಿದ್ದರೇ, ಇತರೆಡೆ ಮತದಾರರು ಮತದಾನಕ್ಕೆ ನಿರಾಸಕ್ತಿ ತೋರಿಸಿದ್ದಾರೆ.

ಬೆಳಗ್ಗೆ ಏಳು ಗಂಟೆಗೆ ಆರಂಭವಾದ ಮತದಾನ ನೀರಸವಾಗಿ ಸಾಗಿತ್ತು. ಮಧ್ಯಾಹ್ನದ ನಂತರದಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಕೊಂಚ ಬಿರುಸು ಪಡೆದುಕೊಂಡಿತು.

ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಮತದಾನ ಶೇಕಡ 70 ದಾಟುವ ಮೂಲಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಕೆ.ಆರ್ ಪುರಂ ಹಾಗೂ ಶಿವಾಜಿನಗರದಲ್ಲಿ ಕಡಿಮೆ ಮತದಾನವಾಗಿದೆ.

ನಗರ ಭಾಗದ ಮತದಾರರು ಮತದಾನದಲ್ಲಿ ಹೆಚ್ಚಿನ ಉತ್ಸಾಹ ತೋರಿಸಲಿಲ್ಲ. 15 ವಿಧಾನಸಭಾ ಕ್ಷೇತ್ರಗಳ ಪೈಕಿ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದೆ. ಹೊಸಕೋಟೆಯಲ್ಲಿ ಶೇಕಡ 90.44 ರಷ್ಟು ಮತದಾನ ದಾಖಲಾಗಿದೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮವಾಗಿ ಎಷ್ಟು ಮತದಾನವಾಗಿದೆ ಎಂಬುವುದರ ವಿವರ ಇಲ್ಲಿದೆ ನೋಡಿ…

15 ವಿಧಾನಸಭಾ ಕ್ಷೇತ್ರಗಳ ಒಟ್ಟು ಮತದಾನ – 66.25 %

 • ಅಥಣಿ – 75.23 %
 • ಕಾಗವಾಡ – 76.27 %
 • ಗೋಕಾಕ್- 73.08 %
 • ಯಲ್ಲಾಪುರ- 77.52 %
 • ಹಿರೇಕೆರೂರು – 78.63 %
 • ರಾಣೆಬೆನ್ನೂರು- 73.53 %
 • ವಿಜಯನಗರ- 64.95 %
 • ಚಿಕ್ಕಬಳ್ಳಾಪುರ- 86.4 %
 • ಕೆ.ಆರ್ ಪುರ- 37.5 %
 • ಯಶವಂತಪುರ- 48.34 %
 • ಮಹಾಲಕ್ಷ್ಮಿ ಲೇಔಟ್ – 50.92 %
 • ಶಿವಾಜಿನಗರ – 41.13 %
 • ಹೊಸಕೋಟೆ- 90.44 %
 • ಕೆ.ಆರ್ ಪೇಟೆ -80.00 %
 • ಹುಣಸೂರು- 80.62 %

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.