ಕೆ.ಎನ್.ಪಿ.ವಾರ್ತೆ,ಧಾರವಾಡ,ಫೆ.12;

ಧಾರವಾಡ ಮಿಶನರಿಗಳು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತರಾಗದೇ ಕನ್ನಡವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುವದು ಎಂದು ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಎಂ. ಮಹೇಶ್ವರಯ್ಯ ಹೇಳಿದರು.

ಕಿಟೆಲ್ ಕಲಾ ಮಹಾವಿದ್ಯಾಲಯ ಹಾಗೂ ಕೇಂದ್ರಿಯ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ “ವೃದ್ಧರಿಗಾಗಿ ಸಾಮಾಜಿಕ ಅವಿಷ್ಕಾರ” ಎಂಬ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಛಾಟಿಸಿ ಮಾತನಾಡಿದರು.

ಜರ್ಮನಿಯರು ಭಾರತದಿಂದ ಏನನ್ನು ತೆಗೆದುಕೊಂಡು ಹೋಗದೇ ಗ್ರಂಥಭಂಡಾರವನ್ನು ಒಯ್ದು ಅವುಗಳನ್ನು ಸಂರಕ್ಷಿಸಿದ್ದಾರೆ. ಅವರ ನೆಲದ ವ್ಯಕ್ತಿ ರೆವರೆಂಡ್ ಫರ್ಡಿನಾಂಡ ಕಿಟೆಲ್‍ರು ಕನ್ನಡ ಸೇವೆಯ ಮೂಲಕ ಕರ್ನಾಟಕದಲ್ಲಿ ಚಿರಪರಿಚಿತರಾಗಿ ಉಳಿದರು. ಕಿಟೆಲ್‍ರ ನಾಮ ಹೊತ್ತ ಕಿಟೆಲ್ ಕಲಾ ಮಹಾವಿದ್ಯಾಲಯವು ಐವತ್ತು ವರ್ಷ ಆಚರಿಸುತ್ತಿರುವದು ಸಂತೋಷದಾಯಕ ಎಂದರು.

ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ನೀಲಾಂಬಿಕಾ ಪಟ್ಟಣಶೆಟ್ಟಿ ಮಾತನಾಡಿ, ಇಂದಿನ ಹಿರಿಯ ಪೀಳಿಗೆ ಮಧ್ಯ ಅಂತರವಿದೆ. ಕಿರಿಯರು ಹಿರಿಯರ ಬಗ್ಗೆ ಪ್ರೀತಿ ತೋರಲಿ. ಹಿರಿಯರು ಕಿರಿಯರನ್ನು ಅರ್ಥೈಸುವ ಹೊಣೆಗಾರಿಕೆ ಇದೆ ಎಂದು ಕಿವಿ ಮಾತು ಹೇಳಿದರು.

ಕೇಂದ್ರಿಯ ವಿಶ್ವವಿದ್ಯಾಲಯದ ಸಮಾಜ ಕಾರ್ಯವಿಭಾಗದ ಮುಖ್ಯಸ್ಥ ಪ್ರೊ. ಚನ್ನವೀರ ಆರ್.ಎಂ. ಮಾತನಾಡಿ, ಇತ್ತೀಚಿನ ದಿನದಲ್ಲಿ ಹಿರಿಯ ನಾಗರಿಕರಿಗೆ ಇಂದಿನ ಸವಾಲುಗಳು ಅನೇಕ ಇವೆ. ಇಂದಿನ ಪೀಳಿಗೆ ಶಿಕ್ಷಣಕ್ಕೆ ಮತ್ತು ಆರ್ಥಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡುತ್ತಿದೆ.

ಇಂದಿನ ಯುವ ಪೀಳಿಗೆ ಮೊಬೈಲ್, ವಾಟ್ಸ್ ಪ್ ನಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಹಿರಿಯರಿಗೆ ತಮ್ಮೊಂದಿಗೆ ಕುಳಿತು ಮಾತನಾಡುವ ವ್ಯಕ್ತಿಗಳು ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪ್ರೊ. ಜೆ.ಎಸ್.ಕುರಿ, ಡಾ. ಎನ್.ಎಂ. ಸಾಲಿ, ಡಾ. ಸದಾಶಿವ ಮರ್ಜಿ, ಲಕ್ಷ್ಮಣ ಉಪ್ಪಾರ, ಡಾ. ರೇಖಾ ಜೋಗುಳ, ಡಾ. ರಾಜೇಶ ತುರಮರಿ ಡಾ. ಸಿ.ಪಿ. ಮನೊಹರ ಡಾ. ರಾಜು ಜಿ ಡಾ. ಆರ್.ಎಸ್.ಪೌಲ್, ಡಾ. ಪಿ.ಎಸ್. ಕೋಟಿ ಉಪಸ್ಥಿತರಿದ್ದರು.

ವರದಿ : ಚಂದ್ರಶೇಖರ್ ಹಿರೇಮಠ ಧಾರವಾಡ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.