ಕೆ.ಎನ್.ಪಿ.ವಾರ್ತೆ,ಜಗಳೂರು,ಏ.03;

ಬೇಸಿಗೆ ಕಳೆದು ಮಳೆಗಾಲ ಕಾಲಿಡುತ್ತಿದೆ. ರಾಜ್ಯದ ಅಲ್ಲಲ್ಲಿ ಬಿರುಗಾಳಿ ಸಹಿತ ಮಳೆ ಬಂದು ಅನಾಹುತಗಳು ಸಂಭವಿಸುತ್ತಿವೆ.
ಇನ್ನು ಮುಂಗಾರು ಮಳೆಯ ಸಮಯದಲ್ಲಿ ಆಗುವ ಅನಾಹುತಗಳು ಎಂದರೆ ಮರಗಳು ಬೀಳುವುದು, ಸಿಡಿಲು ಬಡಿಯುವುದು, ಜನ ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗುವುದು ಸರ್ವೇಸಾಮಾನ್ಯ.

ಇಂತಹ ಅನಾಹುತಗಳ ಮುನ್ಸೂಚನೆ ಮಾನವನ ಗಮನಕ್ಕೆ ಬಂದರೂ ಸಹ ನಮಗೆ ಏಕೆ ಎನ್ನುವ, ಊರ ಉಸಾಬರಿ ನಮಗೇಕೆ ಎನ್ನುವ ಧೋರಣೆಯಿಂದ ಅದು ನನಗೆ ಸಂಬಂಧವಿಲ್ಲ ಅನ್ನುವಂತೆ ವರ್ತಿಸುವರೇ ಹೆಚ್ಚು, ಅಪಾಯ ಆದಮೇಲೆ ಮೇಲಾಧಿಕಾರಿಗಳನ್ನ ದೂರುವ, ಅವರ ಕರ್ತವ್ಯದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಬಿಗಿಯುವವರೆ ನೀವು ಓಡಾಡುವ ರಸ್ತೆಯ ಎರಡೂ ಕಡೆಗಳಲ್ಲಿ ಇರುವ ಸಾಲುಮರಗಳನ್ನ ಒಮ್ಮೆ ಕಣ್ಣಾಡಿಸಿ ಒಣಗಿರುವ ದೊಡ್ಡ ದೊಡ್ಡ ಮರಗಳ ಸ್ಥಿತಿಯನ್ನು ಗಮನಿಸಿದರೆ ಮುಂದಾಗುವ ದುರಂತ ತಡೆಯಬಹುದಲ್ಲವೇ?

ಈ ಫೋಟೋ ದಲ್ಲಿರುವ ಒಣಗಿದ ಮರವನ್ನು ಗಮನಿಸಿ, ಇದು ಜಗಳೂರು ತಾಲೂಕಿನ ರಸ್ತೆಮಾಕುಂಟೆಯ ಸರಕಾರಿ ಪ್ರಾಥಮಿಕ ಶಾಲಾ ಮುಂದಿನ ರಸ್ತೆ ಪಕ್ಕದಲ್ಲಿ ಇರುವ ಮರ, ಈ ತರಹದ ಮರಗಳು ಐದಾರು ಇವೆ. ಗಾಳಿ ಮಳೆಗೆ ಇವು ಧರೆಗೆ ಉರುಳುವ ಸಾಧ್ಯತೆ ಇರುವುದರಿಂದ ಅಪಾಯವೂ ಆಗುವ ಸಾಧ್ಯತೆ ಇದ್ದೇ ಇದೆ ಅಲ್ಲವೇ? ಸಂಬಂಧಪಟ್ಟ ಇಲಾಖೆ ಯವರು ಇತ್ತಕಡೆ ಗಮನ ವಹಿಸಿದರೆ ಮುಂದಾಗುವ ಎಲ್ಲಾ ಅನಾಹುತ ತಪ್ಪಿಸಬಹುದಾಗಿದೆ.

ವರದಿ : ವೇದಮೂರ್ತಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.