ಕೆ.ಎನ್.ಪಿ.ವಾರ್ತೆ,ನವದೆಹಲಿ,ಅ.14;

ಆದಾಯ ತೆರಿಗೆ ಮರುಪಾವತಿ (ಐಟಿ ರಿಟರ್ನ್ಸ್) ಸಲ್ಲಿಸಲು ಸಮಸ್ಯೆ ಎದುರಿಸುತ್ತಿದ್ದ ಮಂದಿಗೆ ಗುಡ್ ನ್ಯೂಸ್. ಐಟಿ ರಿಟರ್ನ್ಸ್ ವಿವರ ಸಲ್ಲಿಕೆಯ ಅವಧಿಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ.

ಸರ್ಕಾರ 2017-18ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಮತ್ತು ಅಡಿಟ್ ವರದಿ ಸಲ್ಲಿಕೆಗೆ ಮತ್ತೆ ಗಡುವು ವಿಸ್ತರಿಸಿದ್ದು, ದಿನಾಂಕವನ್ನು ಅಕ್ಟೋಬರ್ 31, 2018 ಕ್ಕೆ ನಿಗದಿಗೊಳಿಸಿದೆ.

ನೇರ ತೆರಿಗೆಯ ಕೇಂದ್ರೀಯ ಮಂಡಳಿಯು (ಸಿಬಿಡಿಟಿ ) ಐಟಿಆರ್ ಮತ್ತು ಅಡಿಟ್ ವರದಿ ಸಲ್ಲಿಕೆಯ ಗಡುವನ್ನು ವಿಸ್ತರಿಸಿ ಪ್ರಕಟಣೆ ಹೊರಡಿಸಿದೆ. ಉದ್ಯಮದಲ್ಲಿ ರೂ. 1 ಕೋಟಿಗೆ ಮಿಕ್ಕಿದ ವಹಿವಾಟು ಹೊಂದಿರುವ ಅಥವಾ ಒಟ್ಟಾರೆ ಔದ್ಯೋಗಿಕ ಆದಾಯ 50 ಲಕ್ಷ ರೂ.ಗಿಂತ ಹೆಚ್ಚಿದ್ದರೆ ತೆರಿಗೆಯ ಆಡಿಟ್ ವರದಿ ಸಲ್ಲಿಸಬೇಕಾಗುತ್ತದೆ.

ಈ ಮೊದಲು ಆ. 31 ಐಟಿ ರಿಟರ್ನ್ಸ್‌ ಸಲ್ಲಿಸಲು ಕೊನೆಯ ದಿನವಾಗಿತ್ತು. ನಂತರ ತೆರಿಗೆದಾರರಿಗೆ ಸಮಸ್ಯೆಯಾಗುವುದನ್ನು ತಪ್ಪಿಸಲು ದಿನಾಂಕ ವಿಸ್ತರಿಸಿ ಸೆ. 30ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ತಾಂತ್ರಿಕ ಅಡಚಣೆಗಳ ಕಾರಣ ನೀಡಿ ತೆರಿಗೆದಾರರು ಮತ್ತಷ್ಟು ಕಾಲಾವಕಾಶ ಕೋರಿದ್ದರು. ಹೀಗಾಗಿ ಗಡುವು ವಿಸ್ತರಿಸಿ ಅಕ್ಟೋಬರ್ 15 ಕ್ಕೆ ನಿಗದಿಗೊಳಿಸಲಾಗಿತ್ತು. ಇದೀಗ 15 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿದ್ದು, ಅ. 31 ರವರೆಗೆ ತೆರಿಗೆದಾರರು ಐಟಿ ರಿಟರ್ನ್ಸ್‌ ಸಲ್ಲಿಸಬಹುದಾಗಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.