ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಡಿ.13;

ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಜ್ಜಾಗಿದ್ದು, ಡಿಸೆಂಬರ್ 13ರಂದು ಐಪಿಎಲ್ 2020 ಹರಾಜು ಪ್ರಕ್ರಿಯೆಯ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ.

ಎಂಟು ಫ್ರಾಂಚೈಸಿಗಳು ತನ್ನ ಆಟಗಾರರನ್ನು ಬಿಡುಗಡೆ ಮಾಡಿದ ಬಳಿಕ ಈ ಬಾರಿಯ ಹರಾಜು ಪ್ರಕ್ರಿಯೆಗೆ ಒಟ್ಟು 997 ಆಟಗಾರರ ಹೆಸರು ನೋಂದಣಿಯಾಗಿತ್ತು. ಆದರೆ, ಹರಾಜು ಪ್ರಕ್ರಿಯೆಗೆ ಅಂತಿಮವಾಗಿ 332 ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಇದೇ ಮೊದಲ ಬಾರಿಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಬಹುತೇಕ ಎಲ್ಲಾ ಫ್ರಾಂಚೈಸಿಗಳು ಹರಾಜು ಪ್ರಕ್ರಿಯೆಗೆ ಸಜ್ಜಾಗಿವೆ.

ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ 19 ಆಟಗಾರರಿದ್ದಾರೆ. ಅಲ್ಲದೆ ಭಾರತದ ದೇಶಿ ಕ್ರಿಕೆಟ್‌ನಲ್ಲಿ ಆಡಿರುವ 634 ಆಟಗಾರರು, ಅಂತಾರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸಿರುವ 196 ಕ್ರಿಕೆಟಿಗರು, ಅಂತಾರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ 60 ವಿದೇಶಿ ಕ್ರಿಕೆಟಿಗರು ಕೂಡ ಈ ಹರಾಜು ಪ್ರಕ್ರಿಯೆಯ ಭಾಗವಾಗಲಿದ್ದಾರೆ. ಒಟ್ಟಾರೆ 258 ವಿದೇಶಿ ಆಟಗಾರರು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಒಟ್ಟು 971 ಆಟಗಾರರು ಹರಾಜಿಗೆ ಈ ಬಾರಿಯ ಐಪಿಎಲ್​ನಲ್ಲಿ ಆಡಲು ಒಟ್ಟು 991ಆಟಗಾರರಿಂದ ಅರ್ಜಿ ಬಂದಿತ್ತು. 332 ಆಟಗಾರರನ್ನು ಫೈನಲ್ ಮಾಡಿ, 8 ಫ್ರಾಂಚೈಸಿಗಳು ಅಂತಿಮ ಪಟ್ಟಿ ನೀಡಿವೆ. 73 ಸ್ಥಾನಗಳನ್ನು ತುಂಬಬೇಕಿತ್ತು. ಇದಕ್ಕಾಗಿ 332 ಆಟಗಾರರು ಹರಾಜಿನಲ್ಲಿದ್ದಾರೆ. 29 ವಿದೇಶಿಯರಿದ್ದಾರೆ. ಚೆನ್ನೈ ಹಾಗೂ ಮುಂಬೈ ಬಜೆಟ್ ಕಡಿಮೆ ಹೊಂದಿವೆ. ಪಂಜಾಬ್, ಕೆಕೆಆರ್ ಹೆಚ್ಚು ಮೊತ್ತ ಹೊಂದಿದ್ದು, ಹೆಚ್ಚು ಮಂದಿಯನ್ನು ಖರೀದಿಸಲಿವೆ.

ಮೂಲ ಬೆಲೆ ಎಷ್ಟಿದೆ?

ಪ್ಯಾಟ್‌ ಕಮಿನ್ಸ್‌, ಜೋಶ್‌ ಹೇಜಲ್‌ವುಡ್‌, ಕ್ರಿಸ್ ಲೀನ್‌, ಮಿಚೆಲ್‌ ಮಾರ್ಷ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌, ಡೇಲ್‌ ಸ್ಟೇಯ್ನ್‌ ಹಾಗೂ ಏಂಜೆಲೊ ಮ್ಯಾಥ್ಯೂಸ್‌ ತಮ್ಮ ಮೂಲ ಬೆಲೆಯನ್ನು 2 ಕೋಟಿ ಎಂದು ಪ್ರಕಟಿಸಲಾಗಿದೆ. 

1.5 ಕೋಟಿ ರು ಮೂಲ ಬೆಲೆ :

9 ಆಟಗಾರರು 1.5 ಕೋಟಿ ರು ಮೂಲ ಬೆಲೆ ಹೊಂದಿದ್ದು, ರಾಬಿನ್ ಉತ್ತಪ್ಪ ಈ ಗುಂಪಿನಲ್ಲಿರುವ ಪ್ರಮುಖ ಆಟಗಾರರೆನಿಸಿದ್ದಾರೆ. ರಾಬಿನ್‌ ಉತ್ತಪ್ಪ 1.5 ಕೋಟಿ ರೂ. ಮೂಲ ಬೆಲೆ ಪಡೆದ ಭಾರತದ ಏಕೈಕ ಆಟಗಾರ.

ಈ ಮೂಲ ಬೆಲೆಯ ಪಟ್ಟಿಯಲ್ಲಿ ರಾಬಿನ್‌ ಉತ್ತಪ್ಪ, ಶಾನ್‌ ಮಾರ್ಷ್‌, ಕೇನ್ ರಿಚರ್ಡ್ಸನ್‌, ಐಯಾನ್ ಮಾರ್ಗನ್‌, ಜೇಸನ್‌ ರಾಯ್‌, ಕ್ರಿಸ್‌ ವೋಕ್ಸ್‌, ಡೇವಿಡ್‌ ವಿಲ್ಲೀ, ಕ್ರಿಸ್‌ ಮಾರಿಸ್‌ ಮತ್ತು ಕೈಲ್‌ ಅಬಾಟ್ ಈ ಪಟ್ಟಿಯಲ್ಲಿರುವ ಸ್ಟಾರ್‌ ಆಟಗಾರರಾಗಿದ್ದಾರೆ.

1 ಕೋಟಿ ರು ಮೂಲ ಬೆಲೆ :

1 ಕೋಟಿ ರು ಮೂಲ ಬೆಲೆಯಲ್ಲಿ ಭಾರತೀಯ ಆಟಗಾರರಾದ ಪಿಯೂಷ್ ಚಾವ್ಲಾ, ಜಯದೇವ್ ಉನದ್ಕತ್ ಹಾಗೂ ಯೂಸುಫ್ ಪಠಾಣ್ ಇದ್ದಾರೆ. 9 ಆಟಗಾರರು 50 ಲಕ್ಷ ಮೂಲ ಬೆಲೆ ಕೆಟಗೆರಿಯಲ್ಲಿದ್ದಾರೆ. 13 ಮಂದಿ ಮೊದಲ ಬಾರಿ ಆಡುವ ಆಟಗಾರರಿದ್ದಾರೆ.

ಅಂತಿಮ ಪಟ್ಟಿ ಹೀಗಿದೆ :

capped: 186 ಭಾರತೀಯ ಆಟಗಾರರು

un capped: 167 ಆಟಗಾರರು(20 ಲಕ್ಷ ರು ಮೂಲ ಬೆಲೆ)

143: ವಿದೇಶಿ ಆಟಗಾರರು

3: ಅಸೋಸಿಯೇಟ್ ದೇಶಗಳ ಆಟಗಾರರು

332: ಒಟ್ಟಾರೆ ಹರಾಜಾಗಿರುವ ಆಟಗಾರರು

ಡಿಸೆಂಬರ್ 19: ಹರಾಜಿನ ದಿನಾಂಕ

.ನೇರ ಪ್ರಸಾರ: ಸ್ಟಾರ್ ಸ್ಫೋರ್ಟ್ಸ್, ಹಾಟ್ ಸ್ಟಾರ್

ಸಮಯ: 3.30 pm IST

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.