ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಡಿ.30;

ವೆಸ್ಟ್‌ ಇಂಡೀಸ್ ವಿರುದ್ಧ ಸರಣಿಯನ್ನು ಗೆದ್ದು 2019ನೇ ಇಸವಿಯನ್ನು ಯಶಸ್ವಿಯಾಗಿ ಅಂತ್ಯಗೊಳಿಸಿರುವ ಟೀಮ್ ಇಂಡಿಯಾ 2020ನೇ ಇಸವಿಯನ್ನು ಗೆಲುವಿನೊಂದಿಗೆ ಆರಂಭಿಸುವ ತವಕದಲ್ಲಿದೆ.

ಶ್ರೀಲಂಕಾ ವಿರುದ್ಧದ ಕಿರು ಸರಣಿ ಇದಾಗಲಿದೆ. ಈ ಸರಣಿಯಲ್ಲಿ ಕೇವಲ ಮೂರು ಟಿ20 ಪಂದ್ಯಗಳನ್ನು ಶ್ರೀಲಂಕಾ ತಂಡ ಟೀಂ ಇಂಡಿಯಾ ವಿರುದ್ಧ ಆಡಲಿದೆ.

ಮತ್ತೊಂದೆಡೆ ಶ್ರೀಲಂಕಾ ತಂಡವೂ ಕೂಡ ಭಾರತದ ನೆಲದಲ್ಲಿ ಸರಣಿ ಗೆಲುವಿನ ತವಕದಲ್ಲಿದ್ದು ಈ ಮೂಲಕ ಹೊಸ ವರ್ಷವನ್ನು ಗೆಲುವಿನೊಂದಿಗೆ ಬರಮಾಡಿಕೊಳ್ಳುವ ಉತ್ಸಾಹದಲ್ಲಿದೆ. ಹೀಗಾಗಿ ಈ ಸರಣಿಯೂ ಸಹಜವಾಗಿಯೇ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿರಲಿದೆ.

ಹೊಸ ವರ್ಷದ ಮೊದಲ ವಾರದಲ್ಲಿ ಮೂರು ಪಂದ್ಯಗಳ ಟಿ-20 ಸರಣಿ ಪೈಕಿ ಜನವರಿ 5 ರಂದು ಮೊದಲ ಪಂದ್ಯ ಗುವಾಹಟಿಯಲ್ಲಿ ನಡೆಯಲಿದೆ.

ಎರಡನೇ ಪಂದ್ಯ ಇಂದೋರ್​ನ ಹೋಲ್ಕಾರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಜನವರಿ 7 ರಂದು ಈ ಪಂದ್ಯ ನಡೆಯಲಿದೆ.

ಜ. 10 ರಂದು ಪುಣೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಅಂತಿಮ ಟಿ-20 ಪಂದ್ಯ ನಡೆಯಲಿದೆ. ಎಲ್ಲ ಟಿ-20 ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಟೀಮ್ ಇಂಡಿಯಾ 2020ರಲ್ಲಿ ಪಾಲ್ಗೊಳ್ಳುವ ಮೊದಲ ಸರಣಿ ಇದಾಗಲಿದೆ. ಈ ಸರಣಿಯ ವೇಳಾಪಟ್ಟಿ ಇಂತಿದೆ :

ಮೊದಲ ಟಿ20:

ದಿನಾಂಕ: 5 ಜನವರಿ

ಸಮಯ: ಸಂಜೆ 7:00

ಕ್ರಿಡಾಂಗಣ: ಗುವಾಹಟಿಯ ಬಾರ್ಸಾಪರಾ ಕ್ರಿಕೆಟ್ ಕ್ರೀಡಾಂಗಣ

ಎರಡನೇ ಟಿ20:

ದಿನಾಂಕ : 7 ಜನವರಿ

ಸಮಯ : ಸಂಜೆ 7:00

ಕ್ರೀಡಾಂಗಣ : ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಕ್ರೀಡಾಂಗಣ

ಮೂರನೇ ಟಿ20:

ದಿನಾಂಕ : ಜನವರಿ 10

ಸಮಯ : ಸಂಜೆ 7:00

ಕ್ರೀಡಾಂಗಣ : ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣ

ಶ್ರೀಲಂಕಾ ವಿರುದ್ಧದ ಸರಣಿಗೆ ಪ್ರಕಟವಾಗಿರುವ ಟೀಮ್ ಇಂಡಿಯಾ ತಂಡ;

 • ವಿರಾಟ್ ಕೊಹ್ಲಿ (ನಾಯಕ)
 • ಶಿಖರ್ ಧವನ್
 • ಕೆ.ಎಲ್. ರಾಹುಲ್
 • ಶ್ರೇಯಸ್ ಅಯ್ಯರ್
 • ಮನೀಶ್ ಪಾಂಡೆ
 • ಸಂಜು ಸ್ಯಾಮ್ಸನ್
 • ರಿಷಭ್ ಪಂತ್ (ವಿಕೆಟ್ ಕೀಪರ್)
 • ಶಿವಂ ದುಬೆ
 • ಯುಜ್ವೇಂದ್ರ ಚಹಲ್
 • ಕುಲದೀಪ್ ಯಾದವ್
 • ರವೀಂದ್ರ ಜಡೇಜಾ
 • ಶಾರ್ದುಲ್ ಠಾಕೂರ್
 • ನವದೀಪ್ ಸೈನಿ
 • ಜಸ್ಪ್ರೀತ್ ಬುಮ್ರಾ
 • ವಾಷಿಂಗ್ಟನ್ ಸುಂದರ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.