ಕೆ.ಎನ್.ಪಿ.ವಾರ್ತೆ,ಹುಬ್ಬಳ್ಳಿ,ಜೂ.02;

ಬೆಂಗಳೂರು-ಹುಬ್ಬಳ್ಳಿ ಮಧ್ಯೆ ವಾಯುಮಾರ್ಗ ಸಂಚಾರ ದಟ್ಟಣೆ ಹಿನ್ನಲೆಯಲ್ಲಿ ಏರ್ ಇಂಡಿಯಾ ಸಂಸ್ಥೆ ಈ ಮಾರ್ಗದಲ್ಲಿ ಏರ್ ಬಸ್ 319 ವಿಮಾನ ವಾರಕ್ಕೆ ನಾಲ್ಕು ಸಲದ ಬದಲಾಗಿ ಪ್ರತಿದಿನ ಸಂಚರಿಸಲಿದೆ. ಈ ಸೇವೆ ಇಂದಿನಿಂದ ಆರಂಭವಾಗಲಿದೆ.

ಏರ್ ಬಸ್ 319 ವಿಮಾನ ಸಂಚಾರ 2017ರ ಡಿಸೆಂಬರ್ ನಲ್ಲಿ ಆರಂಭವಾಗಿತ್ತು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಉದ್ಘಾಟನೆಯಾಗಿತ್ತು. ಆರಂಭದಲ್ಲಿ ವಾರಕ್ಕೆ ಮೂರು ಬಾರಿ ಬೆಂಗಳೂರು-ಹುಬ್ಬಳ್ಳಿ-ಮುಂಬೈ ಮತ್ತು ಮುಂಬೈ-ಹುಬ್ಬಳ್ಳಿ-ಬೆಂಗಳೂರು ಎಂದು ಹಾರಾಟ ನಡೆಸುತ್ತಿತ್ತು.

ಈ ಮಧ್ಯೆ, ಬೆಂಗಳೂರು-ಹುಬ್ಬಳ್ಳಿ ಮಧ್ಯೆ ವಿಮಾನ ಹಾರಾಟ ಇಂದಿನಿಂದ ಪ್ರತಿದಿನವಿರುತ್ತದೆ. ಏರ್ ಇಂಡಿಯಾ ಹೊರತುಪಡಿಸಿ ಸ್ಪೈಸ್ ಜೆಟ್, ಇಂಡಿಗೊಏರ್, ಸ್ಟಾರ್ ಏರ್ ವಿಮಾನಗಳು ಸಹ ಈ ವಾಯುಮಾರ್ಗದಲ್ಲಿ ಹಾರಾಟ ನಡೆಸುತ್ತಿವೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.