ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.22;

ಡಿಸೆಂಬರ್ 01ರಿಂದ ದೇಶದಲ್ಲಿ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಲಿಸುವ ವಾಹನಗಳು ಟೋಲ್ ಸಂಗ್ರಹ ಕೇಂದ್ರ ದಾಟಬೇಕಾದರೆ FASTag ಹೊಂದುವುದು ಕಡ್ಡಾಯವಾಗಲಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಇದನ್ನು ನಿರ್ವಹಿಸುತ್ತಿದೆ. ಫಾಸ್‌ಟ್ಯಾಗ್ ಒಂದು ರೀತಿ ವಾಹನಗಳ ‘ಆಧಾರ್ ಕಾರ್ಡ್‌’ನಂತೆ ಕಾರ್ಯ ನಿರ್ವಹಿಸುತ್ತದೆ.

ರೇಡಿಯೋ ತರಂಗಾಂತರ ಗುರುತು (ಆರ್‌ಎಫ್‌ಐಡಿ) ತಂತ್ರಜ್ಞಾನವು ವಾಹನ ಟೋಲ್ ಫ್ಲಾಜಾದ ಮೂಲಕ ಸಾಗುತ್ತಿದ್ದಂತೆಯೇ ಸ್ವಯಂಚಾಲಿತವಾಗಿ ಫಾಸ್‌ಟ್ಯಾಗ್‌ನಲ್ಲಿರುವ ಹಣ ಕಡಿತಗೊಳ್ಳುವಂತೆ ಮಾಡುತ್ತದೆ.

ಹೀಗಾಗಿ ಕಾಯುವಿಕೆಗೆ ಅಂತ್ಯ ಹಾಡಬಹುದು. ಆದರೆ ಈ ಫಾಸ್ಟ್ ಟ್ಯಾಗ್ ಪಡೆಯುವುದು ಹೇಗೆ? ಏನೆಲ್ಲ ದಾಖಲೆಗಳನ್ನು ಹೊಂದಿರಬೇಕು? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಮುಂದಿದೆ…

ಫಾಸ್ಟ್ ಟ್ಯಾಗ್ ಸಂಕ್ಷಿಪ್ತ ವಿವರ

ಫಾಸ್‌ಟ್ಯಾಗ್ ಬ್ರ್ಯಾಂಡ್ ಹೆಸರು ಭಾರತೀಯ ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಕಂಪೆನಿ ನಿಯಮಿತದ (ಐಎಚ್‌ಎಂಸಿಎಲ್) ಸ್ವಾಮ್ಯಕ್ಕೆ ಒಳಪಟ್ಟಿದೆ. 2014ರಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡಿದ್ದು, ದೇಶದ ರಾಷ್ಟ್ರೀಯ ಹೆದ್ದಾರಿಗಳ 370 ಟೋಲ್ ಪ್ಲಾಜಾಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ರಾಷ್ಟ್ರೀಯ ವಿದ್ಯುನ್ಮಾನ ಸುಂಕ ಸಂಗ್ರಹ(ಎನ್ ಇಟಿಸಿ) ವ್ಯವಸ್ಥೆಯಡಿಯಲ್ಲಿ ಎಲ್ಲಾ ಟೋಲ್ ಪ್ಲಾಜಾಗಳಲ್ಲೂ ಫಾಸ್ಟ್ ಟ್ಯಾಗ್ ಬಳಸಬಹುದಾಗಿದೆ.

ಬ್ಯಾಂಕ್ , ಟೋಲ್ ಪ್ಲಾಜಾಗಳಲ್ಲಿ ಲಭ್ಯ

ಎಚ್ ಡಿ ಎಫ್ ಸಿ, ಐಸಿಐಸಿಐ, ಸಿಂಡಿಕೇಟ್, ಐಡಿ ಎಫ್ ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕಿನಿಂದ ಫ್ಯಾಸ್ಟ್ ಟ್ಯಾಗ್ ಪಡೆದುಕೊಳ್ಳಬಹುದು. ನಂತರ ಫ್ಯಾಸ್ಟ್ ಟ್ಯಾಗ್ ಸ್ಟಿಕರ್ ನಿಮ್ಮ ವಾಹನದ ಮುಂಭಾಗದ ವಿಂಡ್ ಸ್ಕ್ರೀನ್ ಗೆ ಹಾಕಬೇಕು.

ಬೇಕಾದ ದಾಖಲೆಗಳು:

  • 1. ವಾಹನ ನೋಂದಣಿ ಪ್ರಮಾಣ ಪತ್ರ
  • 2. ವಾಹನ ಮಾಲೀಕರ ಪಾಸ್ ಪೋರ್ಟ್ ಸೈಜಿನ ಭಾವಚಿತ್ರ
  • 3. ಗುರುತಿನ ಚೀಟಿ (ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್, ಪಾಸ್ ಪೋರ್ಟ್, ಮತದಾರರ ಗುರುತಿನ ಚೀಟಿ ಅಥವಾ ಆಧಾರ್)

FASTag ಆಕ್ಟೀಷನ್ ಹೇಗೆ?

FASTag ಪಡೆದ ಬಳಿಕ ಅದನ್ನು ಆಕ್ಟಿವೇಟ್ ಮಾಡಿಕೊಳ್ಳಬೇಕು. My FASTag ಆಪ್ ಬಳಸಿ ವಾಹನ ಸಂಖ್ಯೆ ನೀಡಿ activate ಮಾಡಬಹುದು.

NHAI ಪ್ರೀಪೇಯ್ಡ್ ವ್ಯಾಲೆಟ್ ಸೌಲಭ್ಯ ಹೊಂದಿದ್ದು, My FASTag ಆಪ್ ನಲ್ಲಿ ಮುಂಚಿತವಾಗಿ ಹಣ ತುಂಬಿದ್ದರೆ, ಟೋಲ್ ಫೀ ವ್ಯಾಲೆಟ್ ನಿಂದ ಕಡಿತಗೊಳ್ಳಲಿದೆ.

ಅಥವಾ ನಿಮ್ಮ ಸಮೀಪದ ಪ್ರಮಾಣೀಕೃತ ಬ್ಯಾಂಕಿಗೆ ತೆರಳಿ ಫಾಸ್ಟ್ ಟ್ಯಾಗ್ ಜೊತೆಗೆ ನಿಮ್ಮ ಬ್ಯಾಂಕ್ ಖಾತೆ ಲಿಂಕ್ ಮಾಡಿಸಿ ಆಕ್ಟಿವೇಟ್ ಮಾಡಿಸಿಕೊಳ್ಳಬಹುದು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.