ಕೆ.ಎನ್.ಪಿ.ವಾರ್ತೆ,ಕಲಬುರ್ಗಿ,ಜೂ.09;
ಆಳಂದ ತಾಲ್ಲೂಕು ಕೊಡಲಹಂಗರಾದಲ್ಲಿ ಹೆಂಡತಿ ಶಾರದಾಬಾಯಿ(20) ಯ ಶೀಲ ಶಂಕಿಸಿ ಗಂಡನೋರ್ವ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ, ಕೊಲೆಗೈಯಲು ಯತ್ನಿಸಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಗಂಡನೋರ್ವ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಪರಿಣಾಮ ಹೆಂಡತಿಯ ಮುಖ ಸೇರಿದಂತೆ ದೇಹದ ಬಹುತೇಕ ಭಾಗ ಬೆಂಕಿಯಿಂದ ಸುಟ್ಟಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾರದಾಬಾಯಿ ಪರಿಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಒಂದು ವರ್ಷದ ಹಿಂದೆ ಕೊಡಲಹಂಗರಗಾದ ವೀರಣ್ಣ ಅವರ ಜೊತೆ ಶಾರಾದಾಬಾಯಿ ಅವರ ಮದುವೆಯಾಗಿತ್ತು. ವೀರಣ್ಣ ಒಕ್ಕಲುತನ ಕೆಲಸ ಮಾಡಿಕೊಂಡಿದ್ದರು. ಮದುವೆ ಆದಾಗಿನಿಂದಲೂ ಗಂಡ ಅನುಮಾನದ ದೃಷ್ಠಿಯಿಂದ ನೋಡುತ್ತಿದ್ದನಂತೆ. ಯಾರೊಂದಿಗೆ ಮಾತನಾಡಿದರೂ ಅವರೊಂದಿಗೆ ಅನೈತಿಕ ಸಂಬಂಧ ಕಟ್ಟಿ ಹೆಂಡತಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದನಂತೆ. ಇದೇ ವಿಷಯಕ್ಕೆ ಗಂಡ-ಹೆಂಡತಿ ಮಧ್ಯೆ ಜಗಳವಾಗಿದೆ ಎನ್ನಲಾಗಿದ್ದು, ನಿನ್ನೆ ಬೆಳಿಗ್ಗೆ ಅತ್ತೆ ನೀಲಮ್ಮ, ಮಾವ ಗುಂಡಪ್ಪ, ಗಂಡ ವೀರಣ್ಣ ಅವರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಶಾರದಾಬಾಯಿ ತವರು ಮನೆಯವರು ಆರೋಪಿಸಿದ್ದು, ಬೆಂಕಿ ಹಚ್ಚಿದ ನಂತರ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ ಗಂಡ, ಅತ್ತೆ, ಮಾವ ನಾಪತ್ತೆಯಾಗಿದ್ದಾರೆ ಎಂದು ದೂರಿದ್ದಾರೆ.
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
9513326661
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.