ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಜ.04;

ಹಂಪಿಯ ವಿಶ್ವ ಪಾರಂಪರಿಕ ತಾಣಕ್ಕೆ ಪ್ರವಾಸಿಗರನ್ನು ಹೆಚ್ಚು ಹೆಚ್ಚು ಆಕರ್ಷಿಸಲು ಬಳ್ಲಾರಿ ಜಿಲ್ಲಾಡಳಿತ ಸಜ್ಜಾಗಿದ್ದು ಶೀಘ್ರದಲ್ಲೇ ಬ್ಯಾಟರಿ ಚಾಲಿತ ರೈಲುಗಳನ್ನು ಪರಿಚಯಿಸಲು ಸಿದ್ದತೆ ನಡೆಸಿದೆ.

ಮೂರು ಬೋಗಿಗಳನ್ನು ಹೊಂದಿರುವ ಈ ರೈಲು ಒಮ್ಮೆಗೆ 90 ಪ್ರವಾಸಿಗರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ವಿಶ್ವ ಪರಂಪರೆ ತಾಣದ ವಿಸ್ತೀರ್ಣ ಹೆಚ್ಚಿರುವ ಕಾರಣ ಬೇಸಿಗೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬಂದು ನಡೆದಾಡುವುದು ಕಷ್ಟವಾಗುತ್ತದೆ.

ಇದರಿಂದಾಗಿ ಮಾಲಿನ್ಯ ರಹಿತ ವಾಹನಗಳನ್ನು ಪರಿಚಯಿಸಲು ಆಡಳಿತ ನಿರ್ಧರಿಸಿದೆ. ಪ್ರತಿ ಕೋಚ್ 32 ಆಸನಗಳನ್ನು ಹೊಂದಿರುತ್ತದೆ ಮತ್ತು ಮೂರು ಇಂತಹಾ ಕೋಚ್ ಗಳನ್ನು ಇಂಜಿನ್ ಗೆ ಜೋಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಬ್ಯಾಟರಿ ಚಾಲಿತ ರೈಲು ವಿರೂಪಾಕ್ಷ ದೇವಾಲಯ, ಉಗ್ರ ನರಸಿಂಹ, ಸಾಸಿವೆಕಾಳು ಗಣಪತಿ, ರಾಣಿಯ ಸ್ನಾನಗೃಹ, ಕಮಲ ಮಹಲ್ ಸೇರಿದಂತೆ ಪ್ರಮುಖ ಸ್ಮಾರಕಗಳನ್ನು ಸಂಪರ್ಕಿಸಲಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಪತ್ರಿಕೆಗೆ ಹೇಳಿದ್ದಾರೆ.

ಹಂಪಿಯ ಅನೇಕ ಸ್ಥಳಗಳಲ್ಲಿ ದೊಡ್ಡ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿರುವುದರಿಂದ, ಬ್ಯಾಟರಿ ಚಾಲಿತ ಈ ರೈಲುಗಳು ಹೆಚ್ಚಿನ ಜನರನ್ನು ಆಕರ್ಷಿಸಬಹುದು.

ಹಂಪಿ ಸ್ಮಾರಕಗಳ ದರ್ಶನ ಪಡೆಯಲು ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ಯಾಟರಿ ಚಾಲಿತ ಡಬಲ್ ಡೆಕ್ಕರ್ ಬಸ್‌ಗಳನ್ನು ಪರಿಚಯಿಸುವ ಯೋಜನೆ ಸಿದ್ಧವಾಗಿದೆ, ”ಎಂದು ಅವರು ಹೇಳಿದರು.

ಬಸ್‌ನಲ್ಲಿ ಕೆಳಗೆ ಹಾಗೂ ಮೇಲ್ಭಾಗದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಬಹುದಾಗಿದೆ. ಇಡೀ ಬಸ್‌ ಬಹುತೇಕ ಗಾಜಿನಿಂದ ಕೂಡಿರುತ್ತದೆ. ಐತಿಹಾಸಿಕ ಸ್ಮಾರಕಗಳನ್ನು ಬಸ್‌ನಲ್ಲೇ ಕುಳಿತು ಕಣ್ತುಂಬಿಕೊಳ್ಳಬಹುದಾಗಿದೆ.

ಕಳೆದ ತಿಂಗಳು ಹಂಪಿಯಲ್ಲಿ ಬ್ಯಾಟರಿ ಚಾಲಿತ ವಾಹನವೊಂದರ ಅಪಘಾತದ ನಂತರ ಅಂತಹ ವಾಹನಗಳ ಸೇವೆಯನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಗಿತ್ತು.

ಪ್ರಸ್ತುತ, ವಿಜಯ ವಿಠ್ಠಲ ದೇವಾಲಯ ಸಂಕೀರ್ಣಕ್ಕೆ ಪ್ರವಾಸಿಗರನ್ನು ಕರೆದೊಯ್ಯಲು ನಾಲ್ಕು ವಾಹನಗಳಿದೆ. ಏಕೆಂದರೆ ಇತರ ವಾಹನಗಳ ಸಂಚಾರವನ್ನು ದೇವಾಲಯದ ಸಂಕೀರ್ಣ ಮತ್ತು ಸುತ್ತಮುತ್ತ ನಿರ್ಬಂಧಿಸಲಾಗಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.