ಕೆ.ಎನ್.ಪಿ.ವಾರ್ತೆ,ಕಲಬುರಗಿ,ಡಿ.26;

ಇಂದು ಗ್ರಹಣದ ವೇಳೆ ತಮ್ಮ ಮಕ್ಕಳನ್ನು ಕಾಡುತ್ತಿರುವ ವಿಕಲಾಂಗ ಸಮಸ್ಯೆ ಸರಿಪಡಿಸುವ ನಂಬಿಕೆಯೊಂದಿಗೆ ಕೆಲವು ಪೋಷಕರು ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಟ್ಟಿದ್ದಾರೆ. ಇಂತಹ ಘಟನೆ ಕಲಬುರಗಿಯ ತಾಜ್ ಸುಲ್ತಾನಪುರ ಹೊರವಲಯದಲ್ಲಿ ನಡೆದಿದೆ. 

21ನೇ ಶತಮಾನ ವಿಜ್ಞಾನ, ತಂತ್ರಜ್ಞಾನದ ಯುಗ. ಆದರೆ, ರಾಜ್ಯದ ಹಲವೆಡೆ ಈಗಲೂ ಮೂಢನಂಬಿಕೆ ಹೆಚ್ಚಾಗಿದೆ. ಇದಕ್ಕೆ ಕಲಬುರಗಿಯಲ್ಲಿ ನಡೆದಿರುವ ಈ ಘಟನೆ ಒಂದು ಸಾಕ್ಷಿ.

ತಿಪ್ಪೆಯಲ್ಲಿ ಇಬ್ಬರು ಮಕ್ಕಳನ್ನು ಕುತ್ತಿಗೆ ಮಟ್ಟದವರೆಗೆ ಹೂತಿಡಲಾಗಿದೆ. ಸಾಮಾನ್ಯವಾಗಿ ಸೂರ್ಯಗ್ರಹಣದ ವೇಳೆ ಹೀಗೆ ವಿಕಲಚೇತನ ಮಕ್ಕಳನ್ನು ಕುತ್ತಿಗೆ ಮಟ್ಟದವರೆಗೆ ಹೂತಿಟ್ಟರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುತ್ತದೆ ಎಂಬ ನಂಬಿಕೆಯಿದೆ.

ಅನೇಕ ವರ್ಷಗಳಿಂದಲೂ ಈ ಪದ್ಧತಿ ಜಾರಿಯಲ್ಲಿದೆ. ಹೀಗಾಗಿ ಈ ಕುರಿತು ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯೂ ಈ ಹಿಂದೆ ಕಲಬುರಗಿ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಆದರೂ ಈ ಪದ್ಧತಿ ಇಂದಿಗೂ ಹಾಗೆಯೇ ಮುಂದುವರೆದುಕೊಂಡು ಬಂದಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.