ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜು.01;

ವಿಶ್ವ ವೈದ್ಯರ ದಿನಾಚರಣೆ ಪ್ರಯುಕ್ತ, ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸಸಿ ನೆಡುವ ಮೂಲಕ ವಿಶ್ವ ವೈದ್ಯರ ದಿನಾಚರಣೆಯನ್ನು ಇಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪರಿಸರ ಯುವ ಸೇವಾ ಟೀಮ್ ವತಿಯಿಂದ ಡಣಾಪೂರ ಶ್ರೀಶರಣ ಬಸವೇಶ್ವರ ದೇವಸ್ಥಾನದ ಆವರಣದ ಮುಂಭಾಗದಲ್ಲಿ ವೈದ್ಯಕೀಯ ರಂಗದಲ್ಲಿ ಸೇವೆಸಲ್ಲಿಸುತ್ತಿರುವವರೊಂದಿಗೆ ಸಸಿ ನೆಡುವ ಮೂಲಕ ವೈದ್ಯಕೀಯ ದಿನಾಚರಣೆಯನ್ನು ಆಚರಿಸಲಾಯಿತು.

ಈ ವೇಳೆ ಡಾ.ಪ್ರಕಾಶಗೌಡ ರವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬಳಿಕ ಮಾತನಾಡಿ, ಆರೋಗ್ಯ ದೃಷ್ಟಿಯಿಂದ ಪ್ರತಿಯೊಬ್ಬರೂ ಒಂದೊಂದು ಗಿಡಗಳನ್ನು ನೆಟ್ಟು ಪೋಷಿಸಬೇಕು. ಇದರಿಂದ ಉತ್ತಮ ಪರಿಸರ ವಾತಾರವಣ ಸೃಷ್ಟಿಯಾಗುತ್ತದೆ. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು. 

ಈ ವೇಳೆ ಡಣಾಪೂರ ಗ್ರಾಮದಲ್ಲಿ ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಎಸ್.ಕೆ ಬಾದವಾಡಿಗಿ, ಕಿರಿಯ ಆರೋಗ್ಯ ಸಹಾಯಕಿಯಾದ ಮಂಜುಳಾ ಪಾಟಿಲ್, ರಾಘು, ಮೌನೇಶ ಹಾಗೂ ಗ್ರಾಮದ ಹಿರಿಯರಾದ ವಿರುಪಾಕ್ಷಪ್ಪ, ಗುಂಡಯ್ಯ ಸ್ವಾಮಿ, ದೊಡ್ಡನಗೌಡ, ಅಯ್ಯನಗೌಡ, ಚಿದಾನಂದಪ್ಪ, ಮಲ್ಲಿಕಾರ್ಜುನ ಗೌಡ, ಪಂಪನಗೌಡ, ರಾಜು, ಸುರೇಶ, ಶಂಕ್ರಪ್ಪ, ಚಿನ್ನಮ್ಮ ಯುವಕರಾದ ಶ್ರೀಕಾಂತ, ಮಾರುತಿ, ಶರಣಪ್ಪ, ನರಸಣ್ಣ, ಬಸವನಗೌಡ, ದೇವರಾಜ, ನಿಂಗಪ್ಪ ಹಾಗೂ ಗ್ರಾಮದ ಯುವಕರು ಪರಿಸರ ಪ್ರೇಮಿಗಳು, ರೈತರು, ಶಾಲಾ ಮಕ್ಕಳು ಸೇರಿದ್ದರು.

ವರದಿ : ಹನುಮೇಶ್ ಭಾವಿಕಟ್ಟಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.