ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.21;

ತಾಲೂಕಿನ ಡಣಾಪೂರ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ, ಮಕ್ಕಳಿಗೆ ಅನ್ನಪ್ರಾಸನ ಹಾಗೂ ಮಕ್ಕಳ ದಿನಾಚರಣೆಯನ್ನು ಇಂದು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಗರ್ಭಿಣಿಯರನ್ನು ಸಾಲಾಗಿ ಕೂರಿಸಿ ಮುತ್ತೈದೆಯರು ಸಾಮೂಹಿಕವಾಗಿ ಆರತಿ ಬೆಳಗಿ, ಅರಿಶಿಣ, ಕುಂಕುಮ, ಬಳೆ ಹಾಗೂ ರವಿಕೆಯನ್ನು ಉಡುಗೊರೆಯಾಗಿ ನೀಡುತ್ತಿರುವ ದೃಶ್ಯ ಒಂದೆಡೆಯಾದರೆ, ಮತ್ತೊಂದೆಡೆ ಮಕ್ಕಳಿಗೆ ಆಹಾರ ತಿನ್ನಿಸುವ ಮೂಲಕ ಅನ್ನಪ್ರಾಸನ ಕಾರ್ಯಕ್ರಮವನ್ನು ನೆರವೇರಿಸಲಾಯಿತು ಹಾಗೂ ಬಾಣಂತಿಯರಿಗೆ ಪೋಷ್ಟಿಕ ಆಹಾರದ ಬಗ್ಗೆ ತಿಳಿಸಲಾಯಿತು. ಸೀಮಂತ ಮಾಡಿಸಿಕೊಂಡ ಗರ್ಭಿಣಿಯರ ಕಣ್ಣಲ್ಲಿ ಸಂತೃಪ್ತ ಭಾವ ಕಂಡು ಬಂತು. ಬಯಕೆ ಈಡೇರಿದ ಸಂತೋಷವಿತ್ತು.

ತಾ.ಪಂ.ಸದಸ್ಯರಾದ ಬಿ ಪಕೀರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಅಧ್ಯಕ್ಷ ಬೀರಲಿಂಗಪ್ಪ ಹಾಗೂ ಗ್ರಾಮದ ಮುಖಂಡರಾದ ಚಿದಾನಂದಪ್ಪ, ಮಲ್ಲನಗೌಡ, ಅಯ್ಯಪ್ಪ, ಗುಂಡಯ್ಯಸ್ವಾಮಿ, ಅಂಬ್ರಮ್ಮ, ಬಸವರಾಜ, ಶಿವಣ್ಣ, ಶಾಲಾ ಮುಖ್ಯಗುರುಗಳಾದ ಜಗದೀಶಪ್ಪ (ಸ.ಪ್ರೌ), ರಮೇಶ (ಸ.ಹಿ) ಹಾಗೂ ಸಮನ್ವಯ ಸದಸ್ಯರು, ಆರೋಗ್ಯ ಕಿ.ಸ.ಮಂಜುಳಾ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಗರ್ಭಿಣಿ ಮಹಿಳೆಯರು, ಮಕ್ಕಳು ಇದ್ದರು.

ವರದಿ: ಹನುಮೇಶ ಭಾವಿಕಟ್ಟಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.