ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜೂ.11;
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಸಾಪ್ತಾಹಿಕ ಉಚಿತ ಯೋಗ ಶಿಬಿರ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಮಲ್ಲಿಕಾರ್ಜುನ ಮಠದಲ್ಲಿ ಜೂ.15 ರಿಂದ ಜೂ.21 ರವರೆಗೆ ಬೆಳಿಗ್ಗೆ 5.30 ರಿಂದ 7ಗಂಟೆಯವರೆಗೆ ದಿ ಆರ್ಟ್ ಆಫ್ ಲಿವಿಂಗ್, ಭಾರತ ವಿಕಾಸ್ ಪರಿಷತ್ ಹಾಗೂ ಗ್ಯಾನ್ (GYAN) ಗಂಗಾವತಿ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಸಾಪ್ತಾಹಿಕ ಉಚಿತ ಯೋಗ ಶಿಬಿರ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
- ಜೂ.15ರಂದು “ನಿತ್ಯ ಜೀವನದಲ್ಲಿ ಯೋಗ ಮತ್ತು ಆಯುರ್ವೇದ” ಎಂಬ ವಿಷಯದ ಕುರಿತಾಗಿ ಡಾ.ಗುರುರಾಜ ಉಮಚಗಿ ಉಪನ್ಯಾಸ ನೀಡಲಿದ್ದಾರೆ.
- ಜೂ.16ರಂದು “ನಿತ್ಯ ಜೀವನದಲ್ಲಿ ಯೋಗ ಮತ್ತು ಹೋಮಿಯೋಪತಿ” ಎಂಬ ವಿಷಯದ ಕುರಿತಾಗಿ ಯೋಗ ಮತ್ತು ಹೋಮಿಯೋಪತಿ ವೈದ್ಯರಾದ ಡಾ.ವಿವೇಕ ಎನ್.ಪಾಟೀಲ್ ಉಪನ್ಯಾಸ ನೀಡಲಿದ್ದಾರೆ.
- ಜೂ.17ರಂದು “ಯೋಗ ಮತ್ತು ಪ್ರಕೃತಿ ಚಿಕಿತ್ಸೆ” ಎಂಬ ವಿಷಯದ ಕುರಿತಾಗಿ ಡಾ.ಗಂಗಾಧರ ವರ್ಮ ಬಿ.ಆರ್ ಮತ್ತು ಡಾ.ವಿಂದ್ಯಾವರ್ಮ ಉಪನ್ಯಾಸ ನೀಡಲಿದ್ದಾರೆ.
- ಜೂ.18ರಂದು “ಅನಾರೋಗ್ಯಕ್ಕೆ ಆಯುರ್ವೇದದಲ್ಲಿ ಪರಿಹಾರ” ಎಂಬ ವಿಷಯದ ಕುರಿತಾಗಿ ಆಯುರ್ವೇದ ವೈದ್ಯರಾದ ಡಾ.ಪ್ರವೀಣಕುಮಾರ ಉಪನ್ಯಾಸ ನೀಡಲಿದ್ದಾರೆ.
- ಜೂ.19ರಂದು “ರೇಖಿ, ಹೀಲಿಂಗ್ ಮತ್ತು ಪಿರಾಮಿಡ್ ಧ್ಯಾನ” ಎಂಬ ವಿಷಯದ ಕುರಿತಾಗಿ ಯೋಗ ಗುರುಗಳಾದ ಬಸವರಾಜ ಗುರೂಜಿ ಉಪನ್ಯಾಸ ನೀಡಲಿದ್ದಾರೆ.
ಯೋಗ ನಡಿಗೆ ಕಾರ್ಯಕ್ರಮ :
ಆರೋಗ್ಯವಂತ ಬದುಕಿಗೆ ಯೋಗದ ಮಹತ್ವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಜೂ.20ರಂದು ಬೆಳಿಗ್ಗೆ 9.30ಕ್ಕೆ ಯೋಗ ನಡಿಗೆ ಕಾರ್ಯಕ್ರಮ ನಡೆಯಲಿದ್ದು, ಎಪಿಎಂಸಿ ಯಿಂದ ಲಯನ್ಸ್ ಶಾಲೆಯವರೆಗೆ ಯೋಗ ನಡಿಗೆ ಸಾಗಲಿದೆ.
ಲಯನ್ಸ್ ಆವರಣದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ :
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜೂ.21ರಂದು ಬೆಳಿಗ್ಗೆ 5.30ಕ್ಕೆ ಚುಮುಚುಮು ಚಳಿಯ ನಡುವೆಯೇ ಲಯನ್ಸ್ ಆವರಣ ಗಂಗಾವತಿಯಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಯಲಿದೆ.
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
9513326661
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.