ಕೆ.ಎನ್.ಪಿ.ವಾರ್ತೆ,ಹನಮಸಾಗರ,ಮೇ.25;

ಪಟ್ಟಣದ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಬೀಸಿದ ಭಾರಿ ಗಾಳಿಗೆ ವಿವಿಧ ಗ್ರಾಮಗಳಲ್ಲಿನ ಹಾಗೂ ತೋಟಗಳಲ್ಲಿನ ತಗಡುಗಳು ಹಾರಿ ಹೋಗಿದ್ದು, ಮನೆಯ ಗೋಡೆಗಳು ಕುಸಿದಿವೆ.

ಮಾವಿನ ಇಟಗಿ ಗ್ರಾಮದ ರೈತ ಪೀರಪ್ಪ ಚವ್ಹಾಣ ಅವರ ತೋಟದಲ್ಲಿನ ಮನೆ ಹಾಗೂ ಆಕಳ ಡೈರಿಯು ಯರಗೇರಿ ಮದ್ನಾಳ ರಸ್ತೆ ಮಾರ್ಗದಲ್ಲಿದ್ದು ಭಾರಿ ಗಾಳಿ ಮಳೆಯ ಹೊಡೆತಕ್ಕೆ ಎಲ್ಲಾ ತಗಡುಗಳು ಹಾರಿಹೋಗಿದ್ದು ತೋಟದ ಮನೆಯ ಗೋಡೆಯು ಕುಸಿದಿದೆ.

ಡೈರಿಯ ತಗಡುಗಳು ಎರಡು ಆಕಳುಗಳ ಬೆನ್ನಿಗೆ ಬಲವಾಗಿ ಕೊರೆದಿದ್ದು ಸ್ಥಿತಿ ಚಿಂತಾಜನಕವಾಗಿದೆ. ಇನ್ನೂ ಎರಡು ಆಕಳಿನ ಕಾಲಿಗೆ ಗೋಡೆಯ ಕಲ್ಲುಗಳಿಂದ ಪೆಟ್ಟು ಬಿದ್ದಿದೆ. ಅಷ್ಟೇ ಅಲ್ಲದೇ ಈಚೆಗಷ್ಟೇ ಗಂಗಾವತಿಯಿಂದ ಖರೀದಿ ಮಾಡಿ ತಂದಿದ್ದ ರೂ. 40 ಸಾವಿರ ರೂಪಾಯಿಯ ಶೇಂಗಾ ಹಾಗೂ ಹುಲ್ಲಿನ ಬಣವೆಯು ಗಾಳಿಯ ರಭಸಕ್ಕೆ ಹಾರಿ ಹೋಗಿದ್ದು ಮೇವು ಕಾಣೆಯಾದಂತಾಗಿದೆ.

ಗಾಳಿ ಅಬ್ಬರಕ್ಕೆ ಹಾರಿದ ತಗಡುಗಳು, ಕುಸಿದ ಮನೆ, ಗಾಯಗೊಂಡ ಆಕಳು

ರಾತ್ರಿ ತೋಟದ ಡೈರಿಯಲ್ಲಿ ರೈತನ ಮಗ ಮುತ್ತಣ್ಣ ಚವ್ಹಾಣ ಹಾಗೂ ಆತನ ಪತ್ನಿ ಲಕ್ಷ್ಮೀ ಚವ್ಹಾಣ ಹಾಗೂ ಇಬ್ಬರು ಮಕ್ಕಳು ಇದ್ದರು. ಡೈರಿ ಹಾಗೂ ತೋಟದ ಮನೆಯ 20 ತಗಡಿನ ಚಾವಣಿ ಹಾರಿ ಗೋಡೆ ಕುಸಿಯುತ್ತಿದ್ದಂತೆ ಭಯಬೀತರಾಗಿದ್ದಾರೆ. ಆದರೆ ಸ್ವಲ್ಪದರಲ್ಲಿಯೇ ಭಾರಿ ಅನಾಹುತ ತಪ್ಪಿದ್ದು ಯಾವುದೇ ರೀತಿಯ ಜೀವಹಾನಿ ಆಗಿಲ್ಲ. ಆದರೆ ಆಕಳಿನ ಸ್ಥಿತಿ ಗಂಭೀರವಾಗಿದೆ ಎಂದು ಮುತ್ತಣ್ಣ ಚವ್ಹಾಣ ತಿಳಿಸಿದರು.

ಲೋನ್ ಮಾಡಿ ಡೈರಿ ಮಾಡಿದ್ದೇವೆ, ಆಕಳು ಖರೀದಿ ಮಾಡಿದ್ದೇವೆ ಇನ್ನೂ ಬ್ಯಾಂಕಿನ ಲೋನ್ ಸಹ ಮುಟ್ಟಿಲ್ಲ, ಕಳೆದ ವರ್ಷ ಬರಗಾಲದಿಂದಾಗಿ ತುಂಬಾ ನಷ್ಟ ಅನುಭವಿಸಿದ್ದೇವೆ. ಗೋವುಗಳಿಗಾಗಿ ಸಾಲ ಮಾಡಿ ದೂರದ ಗಂಗಾವತಿಯಿಂದ ತಂದಿದ್ದ ಮೇವು ಸಹ ಹಾರಿ ಹೋಗಿದೆ ಏನು ಮಾಡಬೇಕು, ಮುಂದೆ ಹೇಗೆ ಜೀವನ ನಡೆಸಬೇಕು ಎಂದು ದಿಕ್ಕು ತಿಳಿಯದಂತಾಗಿದೆ ಎಂದು ಕಣ್ಣೀರು ಹಾಕಿದ ರೈತ ಪೀರಪ್ಪ ಚವ್ಹಾಣ.

ಈ ಕೂಡಲೇ ಸ್ಥಳೀಯ ಆಡಳಿತ, ತಾಲ್ಲೂಕ ಆಡಳಿತ ಹಾಗೂ ಜಿಲ್ಲಾ ಆಡಳಿತ ಸ್ಥಾನಿಕ ಪರಿಶೀಲನೆ ಮಾಡಿ ಪರಿಹಾರ ಒದಗಿಸಿ ಬಡ ರೈತರು ಬದುಕುವಂತೆ ಮಾಡಬೇಕು ಎಂದು ಪತ್ರಿಕೆಯೊಂದಿಗೆ ತಮ್ಮ ಅಳನ್ನು ತೋಡಿಕೊಂಡರು.

ವರದಿ : ಚಂದ್ರು ರಾಥೋಡ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.